ಪೋರ್ಟೋರಿಕೊ: ಇಲ್ಲಿನ ಸ್ಯಾನ್ ಜಾನ್ ಪ್ರದೇಶದಲ್ಲಿ ರಿಕ್ಟರ್ ಮಾಪನದ ಪ್ರಕಾರ ಸುಮಾರು 5.0ಪ್ರಮಾಣದಷ್ಟು ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ( ಯುಎಸ್ಜಿಎಸ್) ಹೇಳಿದೆ.
ಯುಎಸ್ಜಿಎಸ್ ಸರ್ವೆ ಸಂಸ್ಥೆ ಪ್ರಕಾರ ಪೋರ್ಟೋರಿಕಾ ಪ್ರದೇಶದಲ್ಲಿ ಪ್ರಸ್ತುತ ಭೂಕಂಪನವನ್ನೂ ಸೇರಿಸಿ ಕಳೆದ 30 ದಿನಗಳಲ್ಲಿ ಒಟ್ಟು 11 ಬಾರಿ ಭೂಕಂಪ ಸಂಭವಿಸಿದ್ದು, ದೇಶದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ತಿಳಿದು ಬಂದಿದೆ.
ಆಗ್ನೇಯ ಹಾಗೂ ನೈರುತ್ಯ ಗ್ವಾನಿಕಾದಿಂದ ಸುಮಾರು 20ಕಿಮಿ ದೂರದಲ್ಲಿ ಭೂಕಂಪ ಸಂಭವಿಸಿದ್ದು, 10.30ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಜನವರಿ 7ರಂದು ಇದೇ ಭಾಗದಲ್ಲಿ 6.4 ಪ್ರಮಾಣದಷ್ಟು ಭೂಕಂಪನ ಉಂಟಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಪೋರ್ಟೋರಿಕೊ ಅಮೆರಿಕದ ಒಂದು ಪ್ರದೇಶವಾಗಿದ್ದು, ಕೆರಿಬಿಯನ್ ದ್ವೀಪ ಮತ್ತು ಪರ್ವತಗಳು, ಜಲಪಾತಗಳು ಮತ್ತು ಉಷ್ಣವಲಯದ ಕಾಡುಗಳು ಮತ್ತು ಭೂದೃಶ್ಯವನ್ನು ಹೊಂದಿರುವ ಭಾಗವಾಗಿದೆ.