ಕರ್ನಾಟಕ

karnataka

ETV Bharat / international

ಗುಂಡಿನ ದಾಳಿಯಲ್ಲಿ ಐವರ ಸಾವು.. ಬೆಚ್ಚಿ ಬಿದ್ದ ಜನ - US SHOOTING

ಒತ್ತೆಯಾಳುಗಳಾಗಿರುವ ಜನರನ್ನು ರಕ್ಷಿಸಲು ಹೋದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಲಿಫೋರ್ನಿಯಾದ ಶೆರಿಫ್‌ ಡೆಪ್ಯೂಟಿ ಸೇರಿದಂತೆ ಐವರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಸೋಮವಾರದಂದು ತಿಳಿಸಿದ್ದಾರೆ.

5 die, including deputy, in shootings at California home
ಗುಂಡಿನ ದಾಳಿ

By

Published : Jul 27, 2021, 6:51 AM IST

Updated : Jul 27, 2021, 7:26 AM IST

ಬೇಕರ್ಸ್‌ಫೀಲ್ಡ್ (ಅಮೆರಿಕ): ಸ್ಯಾನ್ ಜೊವಾಕ್ವಿನ್ ವ್ಯಾಲಿ ಮನೆಯೊಳಗೆ ಒತ್ತೆಯಾಳುಗಳಾಗಿರುವ ಜನರನ್ನು ರಕ್ಷಿಸಲು ತಂಡ (SWAT- Special Weapons And Tactics)ವೊಂದು ಹೋಗಿದ್ದು, ಆ ವೇಳೆಯಲ್ಲಾದ ಗುಂಡಿನ ದಾಳಿಯಲ್ಲಿ ಕ್ಯಾಲಿಫೋರ್ನಿಯಾದ ಭದ್ರತಾ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಬೇಕರ್ಸ್‌ಫೀಲ್ಡ್‌ನ ವಾಯವ್ಯದಲ್ಲಿರುವ ಕೃಷಿ ಪ್ರದೇಶದ ಮಧ್ಯದಲ್ಲಿರುವ ವಾಸ್ಕೊದಲ್ಲಿ ಭಾನುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಗನ್​ಮ್ಯಾನ್​ನ ತಾಯಿ, ಪುತ್ರರನ್ನು ಗುರಿಯಾಗಿಸಿಟ್ಟುಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ನಂತರ ಶಂಕಿತನು ಮನೆಯ ಮೇಲೆ ಬಂದೂಕುಗಳೊಂದಿಗೆ ಎಸ್ಕೇಪ್​ ಆಗುವ ವೇಳೆ, ಭದ್ರತಾ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ಆತನು ಸಾವನ್ನಪ್ಪಿದ್ದಾನೆ.

ಹತ್ಯೆಗೀಡಾದ ಅಧಿಕಾರಿ ಕ್ಯಾಂಪಸ್ ಎಂದು ಗುರುತಿಸಲಾಗಿದೆ. ಇವರು ಶೆರಿಫ್ ಕಚೇರಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಮೆರೀನ್​​ಗಳಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸಿದ ಅನುಭವ ಸಹ ಹೊಂದಿದ್ದರು.

ಕೌಟುಂಬಿಕ ಕಲಹ:

ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಒತ್ತೆಯಾಳುಗಳಾಗಿರುವವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ/ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಶಂಕಿತನು 41 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಸಂದರ್ಭ ಶಂಕಿತ, ಅಧಿಕಾರಿಯೂ ಸೇರಿ ಐವರು ಮೃತಪಟ್ಟಿದ್ದಾರೆ. ಆ ವೇಳೆ ಇಬ್ಬರು ಮಹಿಳೆಯರು, ಇಬ್ಬರು ಬಾಲಕಿಯರು ತಪ್ಪಿಸಿಕೊಂಡಿದ್ದಾರೆ. ಈ ಇಬ್ಬರು ಯಾರೆಂದು ಇನ್ನೂ ಸ್ಪಷ್ಟವಾಗಿಲ್ಲ.

Last Updated : Jul 27, 2021, 7:26 AM IST

ABOUT THE AUTHOR

...view details