ವಾಷಿಂಗ್ಟನ್: ಅಮೆರಿಕ ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಿದ್ದ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನ ಪುನಃ ಸ್ಥಾಪಿಸಿ ಎಂದು ಅಮೆರಿಕ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಭಾರತಕ್ಕೆ ನೀಡಿದ್ದ ಆದ್ಯತಾ ಟ್ರೇಡ್ ಮರುಸ್ಥಾಪಿಸಿ: ಅಮೆರಿಕಕ್ಕೆ ಜನಪ್ರತಿನಿಧಿಗಳಿಂದ ಪತ್ರ - ಆದ್ಯತಾ ಟ್ರೇಡ್
ಭಾರತಕ್ಕೆ ನೀಡಲಾಗಿದ್ದ ಸಾಮಾನ್ಯ ಆದ್ಯತಾ ಕಾರ್ಯಕ್ರಮವನ್ನು (ಜಿಎಸ್ಪಿ) ಪುನಃ ಸ್ಥಾಪಿಸಿ ಎಂದು ಅಮೆರಿಕ ಜನಪ್ರತಿನಿಧಿಗಳು ಟ್ರಂಪ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಭಾರತಕ್ಕೆ ನೀಡಲಾಗಿದ್ದ ಸಾಮಾನ್ಯ ಆದ್ಯತಾ ಕಾರ್ಯಕ್ರಮವನ್ನು (ಜಿಎಸ್ಪಿ) ಅಮೆರಿಕ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ಹೈಜರ್ಗೆ ಅಮೆರಿಕ ಕಾಂಗ್ರೆಸ್ನ 44 ಸದಸ್ಯರು ಪತ್ರ ಬರೆದಿದ್ದು, ಭಾರತದಲ್ಲಿ ಮೇ ತಿಂಗಳಲ್ಲಿ ಹೊಸದಾಗಿ ರಚನೆಯಾದ ನೂತನ ಸರ್ಕಾರದೊಂದಿಗೆ ನಮ್ಮ ವ್ಯಾಪಾರ ಸಂಬಂಧ ಮುಂದುವರೆಸಲು ನಮ್ಮ ಸಹಮತವಿದೆ. ಹೊಸ ಭಾರತೀಯ ಅಧಿಕಾರಿಗಳು ಅಮೆರಿಕನ್ ಕಂಪನಿಗಳು ಮತ್ತು ಕಾರ್ಮಿಕರ ಮಾರುಕಟ್ಟೆ ಪ್ರವೇಶವನ್ನ ಸುಧಾರಿಸುವ ಪರಿಹಾರಗಳನ್ನು ನೀಡುತ್ತಾರೆ ಎಂದು ನಂಬಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜಿಎಸ್ಪಿ ಅಮೆರಿಕದ ಬೃಹತ್ ಹಾಗೂ ಹಳೆಯ ವಾಣಿಜ್ಯ ವಹಿವಾಟು ವ್ಯವಸ್ಥೆಯಾಗಿದ್ದು, ಆಯ್ದ ಕೆಲವು ರಾಷ್ಟ್ರಗಳಿಗೆ ಮಾತ್ರವೇ ಸುಂಕರಹಿತವಾಗಿ ಸಾವಿರಾರು ಸರಕು ಮತ್ತು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ನೀಡಿದ್ದ ಜಿಎಸ್ಪಿ ಸ್ಥಾನ ಸ್ಥಗಿತಗೊಳಿಸಲು ಮಾರ್ಚ್ 4ರಂದು ನಿರ್ಧರಿಸಿದ್ದರು. ಇದು ಜೂನ್ 5ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.