ನ್ಯೂಯಾರ್ಕ್(ಅಮೆರಿಕ):ಈಗಾಗಲೇ ಕೊರೊನಾ ವೈರಸ್ನಿಂದಾಗಿ ನೊಂದು ಬೆಂದಿರುವ ಅಮೆರಿಕ, ಈ ಮಹಾಮಾರಿ ಕಟ್ಟಿಹಾಕಲು ದಾಪುಗಾಲು ಇಡುತ್ತಿದ್ದೆ. ಆದರೆ, ಯಾವ ಕಾರ್ಯಗಳು ಮಾತ್ರ ಸಫಲವಾಗುತ್ತಿಲ್ಲ. ಈಗಾಗಲೇ ಅಮೆರಿಕ ಕೊರನಾದಿಂದಾಗಿ ತೀವ್ರ ಆತಂಕದಲ್ಲಿದ್ದು, ಈ ವೈರಸ್ ಎರಡನೇ ಹಂತಕ್ಕೆ ಕಾಲಿಟ್ಟರೆ ಮುಂಜಾಗ್ರತೆ ವಹಿಸಲು ಶೇ.42 ರಷ್ಟು ಮುಖ್ಯ ಹಣಕಾಸು ಅಧಿಕಾರಿಗಳು (ಸಿಎಫ್‌ಒಗಳು) ಸಿದ್ಧರಾಗಿಲ್ಲ ಎಂಬ ಆತಂಕಕಾರಿ ವಿಷಯವೊಂದನ್ನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಕೇವಲ 22 ಪ್ರತಿಶತದಷ್ಟು ಸಿಎಫ್‌ಒಗಳು ಮಾತ್ರ ಎರಡನೇ ಹಂತದ ಕೊರೊನಾ ಸನ್ನಿವೇಶಕ್ಕೆ ಯೋಜನೆಗಳನ್ನು ಹೊಂದಿದ್ದಾರೆ. ಆದರೆ, ಆಕಸ್ಮಿಕವಾಗಿ ಈ ವೈರಸ್ ತೀವ್ರತೆಯನ್ನೊಳಗೊಂಡರೆ ಅದನ್ನು ತಡೆಹಿಡಿಯಲು ಯಾವ ಯೋಜನೆಗಳೂ ಸಹ ಸಿದ್ದವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ.