ಕರ್ನಾಟಕ

karnataka

ETV Bharat / international

17 ನೇ ಮಹಡಿಯಿಂದ ಕೆಳಗೆ ಬಿದ್ದು 3 ವರ್ಷದ ಬಾಲಕ ಸಾವು - ಅಮೆರಿಕಾದ ಚಿಕಾಗೋದಲ್ಲಿ ಬಾಲಕ ಸಾವು

ಅಪಾರ್ಟ್​ಮೆಂಟ್​ವೊಂದರ 17 ನೇ ಮಹಡಿಯಲ್ಲಿ ಕಿಟಕಿಗೆ ಹಾಕಿದ ಪರದೆ ಹಿಡಿದು ಮೂರು ವರ್ಷದ ಬಾಲಕ ಆಟವಾಡುತ್ತಿರುವಾಗ, ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

boy death , ಬಾಲಕ ಸಾವು
boy death

By

Published : Nov 25, 2021, 8:14 AM IST

Updated : Nov 25, 2021, 12:23 PM IST

ಚಿಕಾಗೋ: ಚಿಕಾಗೋದ ಅಪಾರ್ಟ್​​ಮೆಂಟ್​ವೊಂದರ 17 ನೇ ಮಹಡಿಯ ಕಿಟಕಿಯಿಂದ ಮೂರು ವರ್ಷದ ಬಾಲಕನೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಾಮರ್ ರೋಚ್ ಜೂನಿಯರ್ ಮೃತ ಬಾಲಕ. ಮನೆಯ ಕಿಟಕಿಗೆ ಹಾಕಿದ ಪರದೆಯನ್ನು ಹೊರಗೆ ತಳ್ಳಿ ಆಟವಾಡುತ್ತಿರುವಾಗ ಬುಧವಾರ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಆತನನ್ನು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಾಮರ್ ರೋಚ್ ಮೃತಪಟ್ಟಿದ್ದಾನೆ ಎಂದು ಚಿಕಾಗೋ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಅಪೌಷ್ಟಿಕತೆ, ರಕ್ತಹೀನತೆ.. ರಾಜ್ಯದ 14 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ

ಬಾಲಕನ ಸಾವಿನ ಕುರಿತು ಚಿಕಾಗೋ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Last Updated : Nov 25, 2021, 12:23 PM IST

ABOUT THE AUTHOR

...view details