ಕರ್ನಾಟಕ

karnataka

ETV Bharat / international

ಪ್ರೌಢಶಾಲೆಯ ಹೊರಗೆ ಗುಂಡಿನ ದಾಳಿ: ಮೂವರು ಅಪ್ರಾಪ್ತರಿಗೆ ಗಾಯ - ಡೆಸ್ ಮೊಯಿನ್ಸ್ ಡೌನ್‌ಟೌನ್ ಬಳಿಯ ಈಸ್ಟ್ ಹೈಸ್ಕೂಲ್ ಮೈದಾನದಲ್ಲಿ ಗುಂಡಿನ ದಾಳಿ

ಡೆಸ್ ಮೊಯಿನ್ಸ್ ಡೌನ್‌ಟೌನ್ ಬಳಿಯ ಈಸ್ಟ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಘಟನೆ ಮೂವರು ಅಪ್ರಾಪ್ತರು ಗಾಯಗೊಂಡಿದ್ದಾರೆ.

shooting
ಸಾಂದರ್ಭಿಕ ಚಿತ್ರ

By

Published : Mar 8, 2022, 6:45 AM IST

ಡೆಸ್ ಮೊಯಿನ್ಸ್(ಅಮೆರಿಕ​​): ಅಯೋವಾ ಪ್ರೌಢಶಾಲೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಅಪ್ರಾಪ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ರಾಜಧಾನಿಯಿಂದ ಅರ್ಧ ಮೈಲಿ ದೂರದಲ್ಲಿರುವ ಡೆಸ್ ಮೊಯಿನ್ಸ್ ಡೌನ್‌ಟೌನ್ ಬಳಿಯ ಈಸ್ಟ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಘಟನೆ ಸಂಬಂಧ ಸಂಭಾವ್ಯ ಶಂಕಿತರನ್ನು ಬಂಧಿಸಲಾಗಿದ್ದು, ಮೂವರು ಅಪ್ರಾಪ್ತರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:'ಪಕ್ಕದಲ್ಲೇ ಬಾಂಬ್ ಸ್ಫೋಟ ಆಯ್ತು, ಓಡಿ ಪ್ರಾಣ ಉಳಿಸಿಕೊಂಡೆ': ಭೀಕರತೆ ಬಿಚ್ಚಿಟ್ಟ ಕಲಬುರಗಿ ಯುವತಿ

ಅಮೆರಿಕದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳು ಗುಂಡಿನ ದಾಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮಕೈಗೊಂಡರೂ ಇಂತಹ ದಾಳಿಗಳು ನಿಲ್ಲದಿರುವುದು ಮಾತ್ರ ವಿಪರ್ಯಾಸ

ABOUT THE AUTHOR

...view details