ಪೂರ್ವ ಬ್ರನ್ಸ್‌ವಿಕ್ (ಅಮೆರಿಕ): ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಮನೆಯ ಹಿಂದಿನ ಈಜುಕೋಳದಲ್ಲಿ ಸಾವನ್ನಪ್ಪಿರುವ ಘಟನೆ ಪೂರ್ವ ಬ್ರನ್ಸ್ವಿಕ್ನ ನ್ಯೂಜೆರ್ಸಿಯಲ್ಲಿ ನಡೆದಿದೆ.
ಯುಎಸ್: ಈಜುಕೊಳದಲ್ಲಿ ಭಾರತೀಯ ಮೂಲದ ಮೂವರು ಸಾವು - ಪೊಲೀಸ್ ಲೆಫ್ಟಿನೆಂಟ್ ಫ್ರಾಂಕ್ ಸುಟರ್
ಭಾರತೀಯ ಮೂಲದ 62 ವರ್ಷದ ಭರತ್ ಪಟೇಲ್, ಅವರ 33 ವರ್ಷದ ಸೊಸೆ ನಿಶಾ ಪಟೇಲ್ ಮತ್ತವರ ಮಗಳು ಸೋಮವಾರ ಮಧ್ಯಾಹ್ನ ಮನೆಯ ಹಿಂದಿನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
![ಯುಎಸ್: ಈಜುಕೊಳದಲ್ಲಿ ಭಾರತೀಯ ಮೂಲದ ಮೂವರು ಸಾವು ಈಜುಕೊಳದಲ್ಲಿ ಭಾರತೀಯ ಮೂಲದ ಮೂವರು ಸದಸ್ಯರ ಸಾವು](https://etvbharatimages.akamaized.net/etvbharat/prod-images/768-512-7747557-529-7747557-1592986768754.jpg)
ಈಜುಕೊಳದಲ್ಲಿ ಭಾರತೀಯ ಮೂಲದ ಮೂವರು ಸದಸ್ಯರ ಸಾವು
ಈಜುಕೊಳದಲ್ಲಿ ಭಾರತೀಯ ಮೂಲದ ಮೂವರು ಸಾವು
62 ವರ್ಷದ ಭರತ್ ಪಟೇಲ್, ಅವರ ಸೊಸೆ 33 ವರ್ಷದ ನಿಶಾ ಪಟೇಲ್ ಮತ್ತು 8 ವರ್ಷದ ಮೊಮ್ಮಗಳು ಸೋಮವಾರ ಮಧ್ಯಾಹ್ನ ಈಜುಕೊಳದಲ್ಲಿ ಒದ್ದಾಡುತ್ತಿದ್ದರು. ಈ ಮೂವರ ಕಿರುಚಾಟ ಕೇಳಿದ ಅಕ್ಕಪಕ್ಕದ ಮನೆಯವರು ಬ್ರನ್ಸ್‌ವಿಕ್ ಪೊಲೀಸರಿಗೆ ಕರೆ ಮಾಡಿದ್ದರು. ನಾವು ಸ್ಥಳಕ್ಕೆ ಬರುವಷ್ಟರಲ್ಲಿ ಅವರೆಲ್ಲರೂ ಮೃತಪಟ್ಟಿದ್ದರು ಎಂದು ಪೊಲೀಸ್ ಲೆಫ್ಟಿನೆಂಟ್ ಫ್ರಾಂಕ್ ಸುಟರ್ ತಿಳಿಸಿದ್ದಾರೆ.
ಆಕಸ್ಮಿಕವಾಗಿ ಅವರು ಈಜುಕೊಳದಲ್ಲಿ ಮುಳುಗಿದ್ದರಿಂದ ಸಾವು ಸಂಭವಿಸಿವೆ ಎಂದು ಮಂಗಳವಾರ ಮಿಡಲ್ಸೆಕ್ಸ್ ಕೌಂಟಿ ಪ್ರಾದೇಶಿಕ ವೈದ್ಯಕೀಯ ಪರೀಕ್ಷಕರು ಹೇಳಿದ್ದಾರೆ.
Last Updated : Jun 24, 2020, 5:32 PM IST