ಅರ್ವಾಡಾ(ಅಮೆರಿಕ): ಬಂದೂಕುಧಾರಿಯೊಬ್ಬ ಓರ್ವ ಅಧಿಕಾರಿ ಮತ್ತು ಮತ್ತೋರ್ವ ವ್ಯಕ್ತಿಯನ್ನು ಕೊಂದು ತದನಂತರ ಪೊಲೀಸರ ಗುಂಡಿನಿಂದ ಹತ್ಯೆಗೀಡಾದ ಘಟನೆ ಅಮೆರಿಕದ ಡೆನ್ವೇರ್ ಉಪ ನಗರದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ 1.15ಕ್ಕೆ ಅಧಿಕಾರಿಯೊಬ್ಬ ಕರೆ ಮಾಡಿ ಅರ್ವಾಡಾ ನಗರದ ಗ್ರಂಥಾಲಯ ಸಮೀಪದಲ್ಲಿ ಅನುಮಾನಾಸ್ಪದ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾನೆ. ಇದಾದ 15 ನಿಮಿಷದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಮೃತಪಟ್ಟಿರುವ ಬಗ್ಗೆ ತುರ್ತು ಕರೆಯೊಂದರ ಮೂಲಕ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ಎಡ್ ಬ್ರಾಡಿ ಸ್ಪಷ್ಟನೆ ನೀಡಿದ್ದಾರೆ.
ಬಂದೂಕುಧಾರಿಯಿಂದ ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ದಾಳಿಕೋರನನ್ನೂ ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.