ಒರೊವಿಲ್ಲೆ: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿನಿಂದ ಮೂರು ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕ್ಯಾಲಿಫೋರ್ನಿಯಾ ಹೆದ್ದಾರಿ ಪ್ಯಾಟ್ರೋಲ್ ಅಧಿಕಾರಿ ಬೆನ್ ಡ್ರೇಪರ್, ಒಬ್ಬ ವ್ಯಕ್ತಿ ಕಾರಿನಲ್ಲಿ ಪತ್ತೆಯಾಗಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಪಾರಗಲು ಯತ್ನಿಸುತ್ತಿದ್ದ ಎಂದಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ಸ್ಯಾನ್ ಫ್ರಾನ್ಸಿಸ್ಕೋದ ಈಶಾನ್ಯದಲ್ಲಿ ಬೆಂಕಿಯಿಂದ ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ಹಾನಿಗೀಡಾಗಿವೆ ಅಥವಾ ನಾಶವಾಗಿವೆ ಎನ್ನಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ರಾಜ್ಯ ಇತಿಹಾಸದಲ್ಲಿಯೇ ಭೀಕರ ಬೆಂಕಿಯಿಂದ ಧ್ವಂಸಗೊಂಡ ಪ್ಯಾರಡೈಸ್ ಎಂಬ ಪಟ್ಟಣಕ್ಕೂ ಬೆಂಕಿ ಭೀತಿ ಉಂಟಾಗಿದೆ. ಭಯಭೀತರಾದ ನಿವಾಸಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ವಾಷಿಂಗ್ಟನ್‌ನಲ್ಲಿ ಒಂದೇ ದಿನದಲ್ಲಿ ಹಲವು ಎಕರೆ ಭೂಮಿ ಸುಟ್ಟು ಕರಕಲಾಗಿದೆ. ಒರೆಗಾನ್ ಮತ್ತು ಇಡಾಹೊದಲ್ಲಿನ ನಿವಾಸಿಗಳು ಬೆಂಕಿಯಿಂದಾಗಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆ.