ಟೆಕ್ಸಾಸ್ (ಅಮೆರಿಕ):ಅಧಿಕಾರದಿಂದ ಹೊರಹೋಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 25ನೇ ತಿದ್ದುಪಡಿಯು ತನಗೆ "ಝಿರೋ ರಿಸ್ಕ್ " ನೀಡಿದೆ. ಆದರೆ ಜೋ ಬೈಡನ್ ಮತ್ತು ಬೈಡನ್ ಆಡಳಿತವನ್ನು ಆ 25ನೇ ತಿದ್ದುಪಡಿ ಕಾಡಲಿದೆ, ಕಷ್ಟವಾಗಲಿದೆ ಎಂದು ಹೇಳಿದ್ದಾರೆ.
ಟೆಕ್ಸಾಸ್‌ನ ಅಲಾಮೊದಲ್ಲಿನ ಮೆಕ್ಸಿಕೊ ಗಡಿಯಲ್ಲಿ ಮಾತನಾಡಿದ ಟ್ರಂಪ್, ಮುಂಬರುವ ಜೋ ಬೈಡನ್ ಆಡಳಿತಾವಧಿ ಮತ್ತು ಆಗು ಹೋಗುಗಳ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 25 ನೇ ತಿದ್ದುಪಡಿಯು ತನಗೆ "ಶೂನ್ಯ ಅಪಾಯ" ವನ್ನುಂಟುಮಾಡಿದೆ ಅಂದರೆ ನನಗದು ಅಂತಹ ಸಮಸ್ಯೆ ಎನಿಸಲಿಲ್ಲ. ಆದ್ರೆ ಜೋ ಬೈಡನ್ ಅಧಿಕಾರಾವಧಿಯಲ್ಲಿ ಅದು ಹಾಗಾಗುವುದಿಲ್ಲ.