ಕರ್ನಾಟಕ

karnataka

ETV Bharat / international

2020ರಲ್ಲಿ ಜನರ ಬಗ್ಗೆ ಹೆಚ್ಚು ಟ್ವೀಟ್: ಟ್ರಂಪ್, ಬೈಡನ್​ಗೆ ಮೊದಲೆರಡು ಸ್ಥಾನ, ಮೋದಿ? - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

2020ರಲ್ಲಿ ಜನರನ್ನು ಕುರಿತು ಟ್ವೀಟ್​ ಮಾಡಿದ ಟಾಪ್ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೂ ಕಾಣಿಸಿಕೊಂಡಿದ್ದು, 7ನೇ ಸ್ಥಾನ ಪಡೆದುಕೊಂಡಿದ್ದಾರೆ.

most tweeted about people in 2020
2020ರಲ್ಲಿ ಜನರ ಬಗ್ಗೆ ಹೆಚ್ಚು ಟ್ವೀಟ್

By

Published : Dec 9, 2020, 4:17 PM IST

ವಾಷಿಂಗ್ಟನ್: ಟ್ವಿಟರ್​ ಮೈಕ್ರೋ ಬ್ಲಾಗಿಂಗ್ ಸೈಟ್‌ನ ವರ್ಷಾಂತ್ಯದ ಪರಿಶೀಲನೆಯ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಈ ವರ್ಷ ಟ್ವಿಟರ್‌ನಲ್ಲಿ ಜನರ ಬಗ್ಗೆ ಹೆಚ್ಚು ಟ್ವೀಟ್ ಮಾಡಿದ ನಾಯಕರಾಗಿ ಕ್ರಮವಾಗಿ ಮೊದಲು ಮತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ.

ಜನರನ್ನು ಕುರಿತು ಟ್ವೀಟ್​ ಮಾಡಿದ ಟಾಪ್ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಕೂಡ ಕಾಣಿಸಿಕೊಂಡಿದ್ದು, 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಈ ಪಟ್ಟಿಯಲ್ಲಿರುವ ಏಕೈಕ ಮಹಿಳೆಯಾಗಿದ್ದು ಜಾಗತಿಕವಾಗಿ 10ನೇ ಸ್ಥಾನದಲ್ಲಿದ್ದಾರೆ.

"ರಾಜಕೀಯ ಬದಲಾವಣೆ ಮತ್ತು ಸಾರ್ವಜನಿಕ ನಾಯಕರ ಹೊಣೆಗಾರಿಕೆಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸಲು ಜನರು ಈ ವರ್ಷವೂ ಕುಡ ಟ್ವಿಟರ್ ಬಳಸುವುದನ್ನು ಮುಂದುವರೆಸಿದ್ದಾರೆ. 2020ರಲ್ಲಿ ವಿಶ್ವದಾದ್ಯಂತ ಚುನಾವಣೆಗಳ ಬಗ್ಗೆ 700 ಮಿಲಿಯನ್ ಟ್ವೀಟ್‌ಗಳನ್ನು ಮಾಡಲಾಗಿದೆ. ಡೊನಾಲ್ಡ್ ಟ್ರಂಪ್, ಜೋ ಬೈಡನ್, ಬರಾಕ್ ಒಬಾಮ, ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್ ಹೆಚ್ಚು ಟ್ವೀಟ್ ಮಾಡಲಾದ ಜಾಗತಿಕ ವ್ಯಕ್ತಿಗಳಾಗಿದ್ದಾರೆ" ಎಂದು ಟ್ವಿಟರ್ ಗ್ರಾಹಕ ಸಂವಹನಗಳ ಮುಖ್ಯಸ್ಥ ಟ್ರೇಸಿ ಮೆಕ್​ಗ್ರಾವ್ ಹೇಳಿದ್ದಾರೆ.

ABOUT THE AUTHOR

...view details