ಕರ್ನಾಟಕ

karnataka

ETV Bharat / international

ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಘೋಷಣೆ: ಜಂಟಿಯಾಗಿ ಮೂವರಿಗೆ ಒಲಿದ ಗೌರವ - ಮೂವರಿಗೆ ನೊಬೆಲ್​ ಅವಾರ್ಡ್​ ಘೋಷಣೆ

2020ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದೆ. ಮೂರು ದೇಶಗಳ ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ನೀಡಲಾಗಿದೆ.

2020 Nobel Prize in Physics jointly awarded
2020 Nobel Prize in Physics jointly awarded

By

Published : Oct 6, 2020, 4:17 PM IST

ಸ್ಟಾಕ್​​ಹೋಮ್​​:2020ನೇ ಸಾಲಿನ ವಿವಿಧ ವಿಭಾಗಗಳ ನೊಬೆಲ್ ಪ್ರಶಸ್ತಿ ಪ್ರಕಟಗೊಳ್ಳುತ್ತಿದ್ದು, ‘ಹೆಪಟೈಟಿಸ್ ಸಿ’ ವೈರಸ್ ಪತ್ತೆ ಹಚ್ಚಿದ್ದಕ್ಕಾಗಿ ನಿನ್ನೆ ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಭೌತಶಾಸ್ತ್ರ ವಿಭಾಗದ ಪ್ರಶಸ್ತಿ ಕೂಡ ಪ್ರಕಟಗೊಂಡಿದೆ.

ವೈದ್ಯಕೀಯ ವಿಭಾಗದಲ್ಲಿ ಘೋಷಣೆ ಮಾಡಿರುವ ರೀತಿಯಲ್ಲೇ ಭೌತಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದೆ. ಕಪ್ಪು ರಂಧ್ರಗಳನ್ನ(Black holes) ಪತ್ತೆ ಹಚ್ಚಿದ್ದಕ್ಕಾಗಿ ಈ ಪ್ರಶಸ್ತಿ ಒಲಿದು ಬಂದಿದೆ. ಬ್ರಿಟನ್‌ನ ರೋಜರ್​​ ಪೆನ್ರೋಸ್, ಜರ್ಮನಿಯ ರೀನ್‌ಹಾರ್ಡ್ ಜೆನ್ಜೆಲ್ ಮತ್ತು ಅಮೆರಿಕದ ಆಂಡ್ರಿಯಾ ಘೆಜ್ ಅವರಿಗೆ ಈ ಗೌರವ ಸಿಕ್ಕಿದೆ.

ಎರಡು ಸಂಶೋಧನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ. ಕಪ್ಪು ರಂಧ್ರ ಗ್ಯಾಲಕ್ಸಿ( ನಕ್ಷತ್ರಪುಂಜದಲ್ಲಿ)ಯಲ್ಲಿರುವ ಅತಿ ಭಾರವಾದ ನಕ್ಷತ್ರಗಳನ್ನ ತನ್ನ ಈ ಕಪ್ಪು ರಂದ್ರ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಜೆನ್ಜೆಲ್​ ಹಾಗೂ ಘೆಜ್​ ಅಧ್ಯಯನ ಮಾಡಿದ್ದಕ್ಕಾಗಿ ಅವರಿಗೆ ಪ್ರಶಸ್ತಿ​ ನೀಡಲಾಗಿದೆ.

ABOUT THE AUTHOR

...view details