ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಮಿಲಿಟರಿ ನಿಯೋಜನೆ ಕೊನೆಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಘೋಷಿಸಿದ್ದಾರೆ. ನಿಗದಿತ ಅವಧಿಗೂ ಮುನ್ನ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ ಕಾರಣಕ್ಕಾಗಿ ಸಶಸ್ತ್ರ ಪಡೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಿಲಿಟರಿ ನಿಯೋಜನೆ ಅಂತ್ಯಗೊಳಿಸುವುದು ಉತ್ತಮ ಮಾರ್ಗವಾಗಿತ್ತು. ಎಲ್ಲಾ ವಿಭಾಗಗಳ ಜಂಟಿ ಮುಖ್ಯಸ್ಥರು ಮತ್ತು ನಮ್ಮ ಎಲ್ಲಾ ಕಮಾಂಡರ್‌ಗಳ ಸರ್ವಾನುಮತದ ಶಿಫಾರಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲಿ ಈಗ ವಾಯುಪಡೆ ನಿರ್ಗಮಿಸಿದ್ದು, ಅಫ್ಘಾನಿಸ್ತಾನದಿಂದ ಹೊರಡುವವರಿಗೆ ರಕ್ಷಣೆ ಒದಗಿಸುವುದು ಅವರ ಕರ್ತವ್ಯ. ಈ ಕರ್ತವ್ಯ ಪೂರ್ಣಗೊಂಡಿದೆ ಎಂದು ಬೈಡನ್ ತಿಳಿಸಿದ್ದಾರೆ.
ಅಮೆರಿಕದ ಮಿತ್ರರಾಷ್ಟ್ರಗಳು, ಅಫ್ಘಾನಿಸ್ತಾನದೊಂದಿಗೆ ವ್ಯವಹಾರ ಹೊಂದಿರುವ ರಾಷ್ಟ್ರಗಳು ಮತ್ತು ವಿದೇಶಿಗರು ಅಫ್ಘನ್ನಿಂದ ಹೊರಡಲು ಅನುವಾಗುವಂತೆ ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಸುರಕ್ಷತೆ ಒದಗಿಸುವ ಬಗ್ಗೆ ಈಗಾಗಲೇ ವಿದೇಶಾಂಗ ಇಲಾಖೆಯ ಮುಖ್ಯಸ್ಥರನ್ನು ಕೇಳಿದ್ದೇನೆ ಎಂದು ಬೈಡನ್ ಹೇಳಿದ್ದಾರೆ.