ಕರ್ನಾಟಕ

karnataka

ETV Bharat / international

ಮನೆಗೆ ವಿಮಾನ ಅಪ್ಪಳಿಸಿ ಇಬ್ಬರು ಮಹಿಳೆಯರ ದುರ್ಮರಣ - ಯುಎಸ್ ವಿಮಾನ ಅಪಘಾತ

ಖಾಲಿ ಮನೆಗೆ ಸಣ್ಣ ವಿಮಾನ ಡಿಕ್ಕಿ ಹೊಡೆದು ವಿಮಾನದಲ್ಲಿದ್ದ ಇಬ್ಬರು ಮಹಿಳೆಯರು ಮಂಗಳವಾರ ಮೃತಪಟ್ಟಿದ್ದಾರೆ

us plane crash
ವಿಮಾನ ಅಪಘಾತ

By

Published : Jul 15, 2021, 7:51 AM IST

ಕ್ಯಾಲಿಫೋರ್ನಿಯಾ (ಯುಎಸ್):ಉತ್ತರ ಕ್ಯಾಲಿಫೋರ್ನಿಯಾದ ಬೆಟ್ಟವೊಂದರಲ್ಲಿದ್ದ ಖಾಲಿ ಮನೆಗೆ ಸಣ್ಣ ವಿಮಾನ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಮಂಗಳವಾರ ಮೃತಪಟ್ಟಿದ್ದಾರೆ ಎಂದು, ಮೃತ ಮಹಿಳೆಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಪೆಸಿಫಿಕ್ ಗ್ರೋವ್‌ನ ಮೇರಿ ಎಲ್ಲೆನ್ ಕಾರ್ಲಿನ್ ಎಂಬುವವರು ಮಂಗಳವಾರ ವಿಮಾನ ಹಾರಾಟ ನಡೆಸುತ್ತಿದ್ದರು. ರಾಂಚೊ ಕಾರ್ಡೊವಾದ ಆಲಿಸ್ ಡಯೇನ್ ಎಮಿಗ್ ಮತ್ತು ಅವರ ನಾಯಿ ಟೋಬಿ ವಿಮಾನದಲ್ಲಿದ್ದರು ಎಂದು ಎಮಿಗ್ ಅವರ ಕುಟುಂಬ ಟಿವಿಯೊಂದಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಕಾರ, ಮೊಂಟೆರೆ ನಗರದಿಂದ 5 ಮೈಲಿ (8 ಕಿಲೋಮೀಟರ್) ದೂರದಲ್ಲಿರುವ ಮೊಂಟೆರೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ವಿಮಾನ ನಿರ್ಗಮಿಸಿದ ಸ್ವಲ್ಪ ಸಮಯದ ಬಳಿಕ ಅವಳಿ - ಎಂಜಿನ್ ಸೆಸ್ನಾ 421 ಬೆಟ್ಟದಲ್ಲಿದ್ದ ಗೇಟೆಡ್ ಸಮುದಾಯದ ಮನೆಗೆ ಅಪ್ಪಳಿಸಿದೆ. ಆ ವೇಳೆ ಬೆಂಕಿ ಹೊತ್ತಿಕೊಂಡು, ಹತ್ತಿರದ ಪೊದೆ ಪ್ರದೇಶಗಳಿಗೂ ಹರಡಿದೆ. ನಂತರ ಸಿಬ್ಬಂದಿ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ವಿಮಾನದಲ್ಲಿದ್ದ ಆ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ABOUT THE AUTHOR

...view details