ಕರ್ನಾಟಕ

karnataka

ETV Bharat / international

ಶ್ವೇತಭವನಕ್ಕೆ ಕೊರೊನಾ ಕಾಟ: ಇಬ್ಬರು ಸೆನೆಟರ್​​-ಮೂವರು ಪತ್ರಕರ್ತರಿಗೆ ಕೋವಿಡ್​​​​ ಪಾಸಿಟಿವ್! - ಯುಎಸ್​ನ ಇಬ್ಬರು ಸೆನೆಟರ್​ಗಳಿಗೆ ಕೊರೊನಾ

ರಿಪಬ್ಲಿಕನ್ ಸೆನೆಟರ್‌ಗಳಾದ ಉತ್ತರ ಕೆರೊಲಿನಾದ ಥಾಮ್ ಟಿಲ್ಲಿಸ್ ಮತ್ತು ಉತಾಹ್‌ನ ಮೈಕ್ ಲೀ ಮತ್ತು ಶ್ವೇತಭವನದ ಮೂವರು ಪತ್ರಕರ್ತರ ಕೊರೊನಾ ವರದಿ ಪಾಸಿಟಿವ್ ಬಂದಿದೆ.

whitehouse
whitehouse

By

Published : Oct 3, 2020, 1:05 PM IST

ವಾಷಿಂಗ್ಟನ್:ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಜಿ ಸಲಹೆಗಾರ, ಅವರ ಪ್ರಚಾರ ವ್ಯವಸ್ಥಾಪಕ ಮತ್ತು ಶ್ವೇತಭವನದ ಮೂವರು ಪತ್ರಕರ್ತರಲ್ಲಿ ಕೋವಿಡ್-19 ದೃಢಪಟ್ಟಿದೆ.

ಡೊನಾಲ್ಡ್ ಟ್ರಂಪ್ (74) ಮತ್ತು ಮೆಲಾನಿಯಾ ಟ್ರಂಪ್​ಗೆ (50) ಕೊರೊನಾ ಸೋಂಕು ಇರುವುದು ಶುಕ್ತವಾರ ದೃಢಪಟ್ಟಿತ್ತು.

ಇದಾದ ಬಳಿಕ ರಿಪಬ್ಲಿಕನ್ ಸೆನೆಟರ್‌ಗಳಾದ ಉತ್ತರ ಕೆರೊಲಿನಾದ ಥಾಮ್ ಟಿಲ್ಲಿಸ್ ಮತ್ತು ಉತಾಹ್‌ನ ಮೈಕ್ ಲೀ ಮತ್ತು ಶ್ವೇತಭವನದ ಮೂವರು ಪತ್ರಕರ್ತರ ಕೊರೊನಾ ವರದಿಯೂ ಪಾಸಿಟಿವ್ ಬಂದಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರಂಪ್ ವಾಷಿಂಗ್ಟನ್ ಡಿಸಿಯ ಮೇರಿಲ್ಯಾಂಡ್ ಉಪನಗರವಾದ ಬೆಥೆಸ್ಡಾದ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೆಲಾನಿಯಾ ಶ್ವೇತಭವನದಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ABOUT THE AUTHOR

...view details