ಕರ್ನಾಟಕ

karnataka

ETV Bharat / international

ಬಸ್ ಮೇಲೆ ಗುಂಡು ಹಾರಿಸಿದ ಶೂಟರ್ಸ್: ಇಬ್ಬರು ಸಾವು - ಪಾರ್ಟಿ ಬಸ್ ಮೇಲೆ ಗುಂಡು ಹಾರಿಸಿದ ಶೂಟರ್ಸ್

ಸ್ಯಾನ್ ಫ್ರಾನ್ಸಿಸ್ಕೋದಿಂದ ಓಕ್ಲ್ಯಾಂಡ್​ಗೆ ಹಿಂತಿರುಗುತ್ತಿದ್ದ ಪಾರ್ಟಿ ಬಸ್ ಮೇಲೆ ಶೂಟರ್​ಗಳು ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಬಸ್‌ಗೆ ಸುಮಾರು 70 ಸುತ್ತು ಗುಂಡುಗಳನ್ನು ಹಾರಿಸಲಾಯಿತು.

2 teens killed in California party bus shooting identified
2 teens killed in California party bus shooting identified

By

Published : May 20, 2021, 5:32 PM IST

ಓಕ್ಲ್ಯಾಂಡ್ (ಅಮೆರಿಕ):ಸ್ಯಾನ್ ಫ್ರಾನ್ಸಿಸ್ಕೊ ​​ಕೊಲ್ಲಿ ಪ್ರದೇಶದ ಮುಕ್ತಮಾರ್ಗದಲ್ಲಿ ಚಲಿಸುತ್ತಿದ್ದ ಪಾರ್ಟಿ ಬಸ್ ಮೇಲೆ ಶೂಟರ್ಸ್ ಗುಂಡು ಹಾರಿಸಿದ ಪರಿಣಾಮ, ಇಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ತಮ್ಮ ಸ್ನೇಹಿತನ 21ನೇ ಹುಟ್ಟುಹಬ್ಬ ಆಚರಿಸುತ್ತಿದ್ದ ಇಬ್ಬರು ಹದಿಹರೆಯದವರು ಎಂದು ಗುರುತಿಸಲಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ಓಕ್ಲ್ಯಾಂಡ್​ಗೆ ಹಿಂದಿರುಗುತ್ತಿದ್ದ ಬಸ್​ ಮೇಲೆ ಮಂಗಳವಾರ ಮುಂಜಾನೆ 12.20ರ ಸುಮಾರಿಗೆ ಕನಿಷ್ಠ ಇಬ್ಬರು ಶೂಟರ್ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಅಲಾಸಿಯಾ ಥರ್ಸ್ಟನ್ (19) ಮತ್ತು ಜೊಯಿ ಹ್ಯೂಸ್ (16) ಮೃತಪಟ್ಟಿದ್ದು, ಇನ್ನೂ ಐದು ಮಹಿಳೆಯರು ಗಾಯಗೊಂಡಿದ್ದಾರೆ.

ಮತ್ತೊಂದು ವಾಹನದಲ್ಲಿದ್ದ ಕನಿಷ್ಠ ಇಬ್ಬರು ಶೂಟರ್‌ಗಳು ಬಸ್‌ಗೆ ಗುಂಡು ಹಾರಿಸಲಾರಂಭಿಸಿದರು. ನಂತರ ಅವರು ನಗರದ ಬೀದಿಗಳಲ್ಲೇ ಬಸ್ ಮೇಲೆ ಗುಂಡು ಹಾರಿಸುವುದನ್ನು ಮುಂದುವರೆಸಿದರು. ಬಸ್‌ಗೆ ಸುಮಾರು 70 ಸುತ್ತು ಗುಂಡು ಹಾರಿಸಲಾಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details