ಫ್ಲೋರಿಡಾ(ಅಮೆರಿಕ): ರಿವೇರಿಯಾ ಬೀಚ್ ಬಳಿಯ ವಿಕ್ಟೋರಿಯಾ ಸಿಟಿ ಚರ್ಚ್ನಲ್ಲಿ ದುಷ್ಕರ್ಮಿಗಳು ಶನಿವಾರ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಫ್ಲೋರಿಡಾ ಚರ್ಚ್ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿನ ದಾಳಿಗೆ ಇಬ್ಬರು ಬಲಿ - ಫ್ಲೋರಿಡಾ ಚರ್ಚ್ ಮೇಲೆ ದಾಳಿ
ಅಮೆರಿಕದಲ್ಲಿ ಮತ್ತೆ ಗುಂಡಿ ಸದ್ದು ಕೇಳಿಬಂದಿದೆ. ವಿಕ್ಟೋರಿಯಾ ಸಿಟಿ ಚರ್ಚ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಫ್ಲೋರಿಡಾ ಚರ್ಚ್ನಲ್ಲಿ ಗುಂಡಿನ ದಾಳಿ
ಶನಿವಾರ ವ್ಯಕ್ತಿವೋರ್ವರ ಅಂತ್ಯಕ್ರಿಯೆ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. 15 ವರ್ಷದ ಬಾಲಕ ಹಾಗೂ ಓರ್ವ ಯುವಕ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 13 ಸುತ್ತು ಗುಂಡಿನ ದಾಳಿ ನಡೆದಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲವೆಂದು ತಿಳಿದುಬಂದಿದೆ.