ಕರ್ನಾಟಕ

karnataka

ETV Bharat / international

ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದಾರೆ ಇಬ್ಬರು ಭಾರತೀಯ-ಅಮೆರಿಕನ್ನರು - ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ

ತರುಣ್ ಛಾಬ್ರಾ ಮತ್ತು ಸುಮೋನಾ ಗುಹಾ ಅವರನ್ನು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ಹೆಚ್ಚುವರಿ ಸದಸ್ಯರನ್ನಾಗಿ ಘೋಷಿಸಲಾಗಿದೆ.

indo american
indo american

By

Published : Jan 9, 2021, 11:58 AM IST

ವಾಷಿಂಗ್ಟನ್ (ಯು.ಎಸ್): ಅಮೆರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್, ಇಬ್ಬರು ಭಾರತೀಯ-ಅಮೆರಿಕನ್ನರಾದ ತರುಣ್ ಛಾಬ್ರಾ ಮತ್ತು ಸುಮೋನಾ ಗುಹಾ ಅವರನ್ನು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ಹೆಚ್ಚುವರಿ ಸದಸ್ಯರನ್ನಾಗಿ ನೇಮಿಸಿದ್ದಾರೆ.

ಗುಹಾ ಅವರನ್ನು ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕರಾಗಿ ಹೆಸರಿಸಲಾಗಿದ್ದು, ಛಾಬ್ರಾ ಅವರನ್ನು ತಂತ್ರಜ್ಞಾನ ಮತ್ತು ಹಿರಿಯ ಭದ್ರತಾ ನಿರ್ದೇಶಕರಾಗಿ ಹೆಸರಿಸಲಾಗಿದೆ.

ಸುಮೋನಾ ಗುಹಾ ಅವರು ಬೈಡನ್-ಹ್ಯಾರಿಸ್ ಅಭಿಯಾನದಲ್ಲಿ ದಕ್ಷಿಣ ಏಷ್ಯಾ ವಿದೇಶಾಂಗ ನೀತಿ ಕಾರ್ಯ ಸಮೂಹದ ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು ರಾಜ್ಯ ಇಲಾಖೆ ಏಜೆನ್ಸಿ ವಿಮರ್ಶೆಯ ತಂಡದಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಯುಎಸ್ ಸ್ಟೇಟ್ ಡಿಪಾರ್ಟಮೆಂಟ್​​ನಲ್ಲಿ ವಿದೇಶಿ ಸೇವಾ ಅಧಿಕಾರಿಯಾಗಿ ಮತ್ತು ರಾಜ್ಯ ನೀತಿ ಯೋಜನೆಯ ಕಾರ್ಯದರ್ಶಿಯಾಗಿದ್ದರು. ಒಬಾಮಾ ಕಾಲದಲ್ಲಿ ಅವರು ರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಶೇಷ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ತರುಣ್ ಛಾಬ್ರಾ ಅಮೆರಿಕನ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಶಾಲೆಯ ಪದವೀಧರರಾಗಿದ್ದಾರೆ.

ABOUT THE AUTHOR

...view details