ಮೆಕ್ಸಿಕೋ:ಭದ್ರತಾ ಸಿಬ್ಬಂದಿ ಹಾಗೂ ಡ್ರಗ್ಸ್ ಕಳ್ಳ ವ್ಯವಹಾರ ಮಾಡುವ ಸದಸ್ಯರ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ 19 ಮೃತಪಟ್ಟ ಘಟನೆ ಟೆಕ್ಸಾಸ್ ಗಡಿ ಪ್ರದೇಶದಲ್ಲಿ ನಡೆದಿದೆ.
ನಾಲ್ವರು ಪೊಲೀಸರು, ಇಬ್ಬರು ನಾಗರಿಕರು ಹಾಗೂ ಹದಿಮೂರು ಶಂಕಿತ ಡ್ರಗ್ ವ್ಯವಹಾರಸ್ಥರು ಗುಂಡಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಜಖಂಗೊಂಡ ಭದ್ರತಾ ವಾಹನ ಸುಮಾರು ಒಂದು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಶಸ್ತ್ರಾಸ್ತ್ರ ತುಂಬಿದ್ದ 14 ವಾಹನವನ್ನು ಭದ್ರತಾ ಪಡೆ ವಶಕ್ಕೆ ಪಡೆದಿದೆ. ಕೊಹಿಲಾ ರಾಜ್ಯಕ್ಕೆ ಪ್ರವೇಶಿಸಲು ಯತ್ನಿಸಿದ ವೇಳೆ ಭದ್ರತಾ ಸಿಬ್ಬಂದಿ ಜೊತೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಮೆಕ್ಸಿಕೋದ ಡ್ರಗ್ಸ್ ಕಳ್ಳ ವ್ಯವಹಾರ ಮಾಡುವವರನ್ನು ವಿದೇಶಿ ಭಯೋತ್ಪಾದಕರು ಎಂದು ಹೆಸರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ದಿನಗಳ ಬಳಿಕ ಈ ಘಟನೆ ಸಂಭವಿಸಿದೆ. ಆದರೆ ಮೆಕ್ಸಿಕೋ ಈ ಡ್ರಗ್ಸ್ ಮಾರಾಟಗಾರರಿಗೆ ಬೆಂಬಲವಾಗಿ ನಿಂತಿದೆ.
ಗುಂಡಿನ ಚಕಮಕಿಯಲ್ಲಿ ಜಖಂಗೊಂಡ ಭದ್ರತಾ ವಾಹನ