ಮೆಕ್ಸಿಕೋ ಸಿಟಿ:ಮಧ್ಯ ಮೆಕ್ಸಿಕೋದಲ್ಲಿ ಬ್ರೇಕ್ ಫೇಲ್ಯೂರ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಮನೆಯೊಂದಕ್ಕೆ ನುಗ್ಗಿದ್ದು, ಘಟನೆಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೀಕರ ಬಸ್ ಅಪಘಾತ: 19 ಮಂದಿ ಸಾವು - ಮೆಕ್ಸಿಕೋ ಬಸ್ ಅಪಘಾತದಲ್ಲಿ 19 ಮಂದಿ ಸಾವು
ಶುಕ್ರವಾರ ಮಿಕಾವೊಕನ್ ರಾಜ್ಯದಿಂದ ಮೆಕ್ಸಿಕೋ ರಾಜ್ಯದ ಧಾರ್ಮಿಕ ದೇಗುಲಕ್ಕೆ ತೆರಳುತ್ತಿದ್ದ ಬಸ್‌ನ ಬ್ರೇಕ್ ಫೇಲ್ಯೂರ್ ಆಗಿ, ಅಪಘಾತ ಸಂಭವಿಸಿದ್ದು, ಸುಮಾರು 19 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
![ಭೀಕರ ಬಸ್ ಅಪಘಾತ: 19 ಮಂದಿ ಸಾವು 19 killed in Mexico bus crash](https://etvbharatimages.akamaized.net/etvbharat/prod-images/768-512-13748290-195-13748290-1637985750865.jpg)
19 killed in Mexico bus crash
ಶುಕ್ರವಾರ ಮಿಕಾವೊಕನ್ ರಾಜ್ಯದಿಂದ ಮೆಕ್ಸಿಕೋ ರಾಜ್ಯದ ಧಾರ್ಮಿಕ ದೇಗುಲಕ್ಕೆ ತೆರಳುತ್ತಿದ್ದ ಬಸ್‌ನ ಬ್ರೇಕ್ ಫೇಲ್ಯೂರ್ ಆಗಿ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಸ್ಥಳಕ್ಕೆ 10 ಆ್ಯಂಬುಲೆನ್ಸ್ಗಳನ್ನು ಕಳುಹಿಸಲಾಗಿತ್ತು ಎಂದು ರೆಡ್‌ಕ್ರಾಸ್ ಟ್ವೀಟ್ ಮಾಡಿದೆ. ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಹೆಚ್ಚುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು