ವಾಷಿಂಗ್ಟನ್:ದಕ್ಷಿಣ ಫ್ಲೋರಿಡಾದ ಮಿಯಾಮಿ ಬೀಚ್ ಬಳಿ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿದೆ. ಈ ದುರಂತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ 10 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ನೂರಾರು ಮಂದಿ ಸಿಲುಕಿದ್ದಾರೆ ಎನ್ನಲಾಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಭಾರತೀಯ ಕಾಲಮಾನ ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಕಟ್ಟಡದ ಈಶಾನ್ಯ ಭಾಗದಲ್ಲಿರುವ ಕಾರಿಡಾರ್ ಸಂಪೂರ್ಣ ಕುಸಿಯಿತು. ಸರ್ಕಾರದಿಂದ ಅನುಮೋದಿತ ಕೆಲಸದ ಪರವಾನಗಿ ನೀಡಿದ ಮರುದಿನವೇ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ.