ಕರ್ನಾಟಕ

karnataka

ETV Bharat / international

ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ: 10 ಮಂದಿ ಪಾಕಿಸ್ತಾನಿ ಸೈನಿಕರು ಸಾವು - ಉಗ್ರಗಾಮಿಗಳ ದಾಳಿಗೆ ಪಾಕಿಸ್ತಾನ ಸೈನಿಕರು ಸಾವು

ಬಲೂಚಿಸ್ತಾನದ ಕೆಚ್ ಜಿಲ್ಲೆಯ ಭದ್ರತಾ ಪಡೆಗಳ ಚೆಕ್‌ಪೋಸ್ಟ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ 10 ಮಂದಿ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

10 Pakistani soldiers killed in terrorist attack on checkpost in Balochistan Kech
10 ಮಂದಿ ಪಾಕಿಸ್ತಾನಿ ಸೈನಿಕರು ಹುತಾತ್ಮ

By

Published : Jan 28, 2022, 2:36 AM IST

Updated : Jan 28, 2022, 3:02 AM IST

ಬಲೂಚಿಸ್ತಾನ (ಪಾಕಿಸ್ತಾನ):ಬಲೂಚಿಸ್ತಾನದ ಕೆಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ವಿಧ್ವಂಸಕ ದಾಳಿ ನಡೆಸಿದ್ದು, 10 ಮಂದಿ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯ ಪ್ರಕಾರ, ಭಯೋತ್ಪಾದಕರ ದಾಳಿಯು ಜನವರಿ 25-26ರ ರಾತ್ರಿ ಸಂಭವಿಸಿದೆ ಎಂದು ವರದಿಯಾಗಿದೆ. ದಾಳಿ ವೇಳೆ ತೀವ್ರ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿ ಹಿಮ್ಮೆಟ್ಟಿಸುವಾಗ 10 ಮಂದಿ ಸೈನಿಕರು ಮೃತಪಟ್ಟಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ ಕಾರ್ಯಾಚರಣೆ ವೇಳೆ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಬನ್ನುವಿನ ಜಾನಿಖೇಲ್‌ನಲ್ಲಿನ ಸೇನಾ ಪೋಸ್ಟ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಪಾಕ್​ನ ಓರ್ವ ಯೋಧ ಸಾವನ್ನಪ್ಪಿದ್ದ. ಅಲ್ಲದೆ, ಜ. 5ರಂದು ಖೈಬರ್ ಪಖ್ತುಂಖ್ವಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಇಬ್ಬರು ಸೈನಿಕರು ಹಾಗೂ ಅನೇಕ ಭಯೋತ್ಪಾದಕರು ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ:ಅಚ್ಚರಿ.. ಪ್ರಾಣಿಗಳಿಂದ ಪೋಷಿಸಲ್ಪಟ್ಟ ಮಕ್ಕಳು ಹೀಗಿದ್ದಾರೆ..!

Last Updated : Jan 28, 2022, 3:02 AM IST

ABOUT THE AUTHOR

...view details