ಹವಾನಾ (ಕ್ಯೂಬಾ):ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್ವೊಂದು ಸೇತುವೆ ಮೇಲಿಂದ ಬಿದ್ದು, 10 ಮಂದಿ ಮೃತಪಟ್ಟಿರುವ ಘಟನೆ ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲಿ ನಡೆದಿದೆ.
ಹವಾನಾದಿಂದ 40 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ 25 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಆಯೋಗ ವರದಿ ಮಾಡಿದೆ.