ಮೆಕ್ಸಿಕೊ ಸಿಟಿ: ಉತ್ತರ - ಮಧ್ಯ ಮೆಕ್ಸಿಕನ್ ರಾಜ್ಯವಾದ ಝಕಾಟೆಕಾಸ್‌ನಲ್ಲಿ ಗುರುವಾರ ಗವರ್ನರ್ ಕಚೇರಿಯ ಮುಂದೆ ದಾಳಿಕೋರರು 10 ಜನರ ಹಲ್ಲೆ ಮಾಡಿ ಹತ್ಯೆ ಮಾಡಿ ದೇಹಗಳನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ರಾಜ್ಯ ರಾಜಧಾನಿಯ ಮುಖ್ಯ ಪ್ಲಾಜಾದ ಕ್ರಿಸ್ಮಸ್ ಟ್ರೀ ಬಳಿ ಮುಂಜಾನೆ ಪಿಕಪ್ ಟ್ರಕ್‌ನಲ್ಲಿ ದೇಹಗಳಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಗವರ್ನರ್ ಡೇವಿಡ್ ಮೊನ್ರಿಯಲ್ ಮಾತನಾಡಿ, ಪತ್ತೆಯಾಗಿರುವ ದೇಹಗಳ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಭಯಾನಕ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.