ಜಿನೇವಾ (ಸ್ವಿಟ್ಜರ್ಲ್ಯಾಂಡ್) : ವಿಶ್ವ ಆರೋಗ್ಯ ಸಂಸ್ಥೆ ಮಾಡೆರ್ನಾ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಆಯುಧ ದೊರೆತಂತಾಗಿದೆ.
ದಿ ಹಿಲ್ ಪ್ರಕಾರ, ಮಾಡೆರ್ನಾ, ಫೈಝರ್ -ಬಯೋಟೆಕ್, ಆಸ್ಟ್ರಾಜೆನೆಕಾ-ಎಸ್ಕೆ ಬಯೋ ಮತ್ತು ಸೆರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದ ಲಸಿಕೆಗಳು ಡಬ್ಲ್ಯುಹೆಚ್ಒ ತುರ್ತು ಬಳಕೆಯ ಕೋವಿಡ್ ಲಸಿಕೆಯ ಪಟ್ಟಿಯಲ್ಲಿವೆ.
ಇವತ್ತು ವಿಶ್ವ ಆರೋಗ್ಯ ಸಂಸ್ಥೆಯು ಮಾಡೆರ್ನಾ ಲಸಿಕೆ (ಎಂಆರ್ಎನ್ಎ 1273 ) ಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಿದೆ. ಇದು ತುರ್ತು ಬಳಕೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಐದನೇ ಲಸಿಕೆಯಾಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಓದಿ : ಇಂದು ರಷ್ಯಾದಿಂದ ಭಾರತಕ್ಕೆ ಬರಲಿದೆ 'ಸ್ಪುಟ್ನಿಕ್ ವಿ' ಲಸಿಕೆ
18 ವರ್ಷ ಮೇಲ್ಪಟ್ಟವರಿಗೆ ಮಾಡೆರ್ನಾ ಲಸಿಕೆ ಬಳಸಬಹುದು. ಡಬ್ಲ್ಯುಹೆಚ್ಒ ಪ್ರಕಾರ ಈ ಲಸಿಕೆ ಶೇ. 94.1 ರಷ್ಟು ಪರಿಣಾಮಕಾರಿಯಾಗಿದೆ. -250 ಡಿಗ್ರಿ ಸೆಲ್ಸಿಯಸ್ನಿಂದ -150 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಲಸಿಕೆಯನ್ನು ಸಂಗ್ರಹಿಸಿಡಬೇಕು. 2 ಡಿಗ್ರಿ ಸೆಲ್ಸಿಯಸ್ನಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 30 ದಿನಗಳವರೆಗೂ ಸಂರಕ್ಷಿಸಿಡಬಹುದು.