ಕರ್ನಾಟಕ

karnataka

ETV Bharat / international

Somalia Food Insecurity : 2022ರ ಮೇ ವೇಳೆಗೆ ಸೋಮಾಲಿಯಾದಲ್ಲಿ 'ಆಹಾರ ಅಭದ್ರತೆ' ಇನ್ನಷ್ಟು ಹದಗೆಡಲಿದೆ : ವಿಶ್ವಸಂಸ್ಥೆ ಎಚ್ಚರಿಕೆ - ಆಹಾರದ ಅಭದ್ರತೆ

ಬರುವ ಡಿಸೆಂಬರ್​ನಲ್ಲಿ ಸೋಮಾಲಿಯಾದಲ್ಲಿ ಅಂದಾಜು 3.5 ಮಿಲಿಯನ್ ಜನರು ತೀವ್ರ ಆಹಾರ ಅಭದ್ರತೆ ಎದುರಿಸುತ್ತಾರೆ. ಅವರಲ್ಲಿ ಸುಮಾರು 6,40,730 ಜನರು ತುರ್ತು ಪರಿಸ್ಥಿತಿ ಎದುರಿಸುತ್ತಾರೆ. 2022ರ ಮೇ ತಿಂಗಳ ವೇಳೆಗೆ ಆಹಾರದ ಅಭದ್ರತೆ ಮತ್ತಷ್ಟು ಹದಗೆಡಲಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮಾಹಿತಿ ನೀಡಿದೆ..

Somalia Food Insecurity
Somalia Food Insecurity

By

Published : Nov 14, 2021, 6:48 PM IST

ಮೊಗಾದಿಶು (ಸೋಮಾಲಿಯಾ):2022ರ ಮೇ ವೇಳೆಗೆ ಸೋಮಾಲಿಯಾ(Somalia)ದಲ್ಲಿ ಆಹಾರದ ಅಭದ್ರತೆ (Food Insecurity) ಗಮನಾರ್ಹವಾಗಿ ಹದಗೆಡುವ ಸಾಧ್ಯತೆಯಿದೆ. ಅನೇಕ ಕುಟುಂಬಗಳು ಆಹಾರದಿಂದ ವಂಚಿತರಾಗುತ್ತವೆ ಎಂದು ವಿಶ್ವಸಂಸ್ಥೆ (United Nations) ಎಚ್ಚರಿಕೆ ನೀಡಿದೆ.

ಈಗಾಗಲೇ ಸೋಮಾಲಿಯಾದಲ್ಲಿ ಪ್ರಸ್ತುತ 5.9 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಆರ್ಥಿಕ ನೆರವು ಮತ್ತು ರಕ್ಷಣೆಯ ಅಗತ್ಯವಿದೆ. ಅಕ್ಟೋಬರ್-ಡಿಸೆಂಬರ್ ಮಳೆಯ ವಿಳಂಬವು ಪೂರಕ ಆಹಾರ ಮತ್ತು ಜಾನುವಾರುಗಳ ಉತ್ಪನ್ನಗಳಿಂದ ಬರುವ ಆದಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ.

ಬರುವ ಡಿಸೆಂಬರ್​ನಲ್ಲಿ ಅಂದಾಜು 3.5 ಮಿಲಿಯನ್ ಜನರು ತೀವ್ರ ಆಹಾರ ಅಭದ್ರತೆ ಎದುರಿಸುತ್ತಾರೆ. ಅವರಲ್ಲಿ ಸುಮಾರು 6,40,730 ಜನರು ತುರ್ತು ಪರಿಸ್ಥಿತಿ ಎದುರಿಸುತ್ತಾರೆ.

2022ರ ಮೇ ತಿಂಗಳ ವೇಳೆಗೆ ಆಹಾರದ ಅಭದ್ರತೆ ಮತ್ತಷ್ಟು ಹದಗೆಡಲಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮಾಹಿತಿ ನೀಡಿದೆ.

ಇದನ್ನೂ ಓದಿ: ಕೇವಲ 21 ವಾರಕ್ಕೆ ಜನನ.. ವಿಶ್ವದ ಅತ್ಯಂತ ಅಕಾಲಿಕ ಶಿಶು ಎಂಬ ಹೆಗ್ಗಳಿಕೆ!

ದೇಶದ ವಿವಿಧ ಭಾಗಗಳಲ್ಲಿನ ಹವಾಮಾನ ವೈಪರೀತ್ಯ, ಬರಗಾಲ, ಪ್ರವಾಹ, ಕೋವಿಡ್​-19 ಸಾಂಕ್ರಾಮಿಕ, ಜಾನುವಾರುಗಳ ಸಾವು ಮತ್ತು ಹೆಚ್ಚುತ್ತಿರುವ ಬಡತನದಿಂದಾಗಿ 2022ರಲ್ಲಿ ಸೋಮಾಲಿಯಾದಲ್ಲಿ 7.7 ಮಿಲಿಯನ್ ಜನರಿಗೆ ಮಾನವೀಯ ನೆರವು ಮತ್ತು ರಕ್ಷಣೆಯ ಅಗತ್ಯವಿದೆ. ದೇಶದ ಶೇ.71ರಷ್ಟು ಜನರು ಬಡತನ ರೇಖೆಯ ಕೆಳಗೆ ವಾಸಿಸಲಿದ್ದಾರೆ ಎಂದು UNOCHA ತಿಳಿಸಿದೆ.

ABOUT THE AUTHOR

...view details