ಜೋಹಾನ್ಸ್ಬರ್ಗ್: ಪ್ರವಾಸಿಗರ ತಂಡವೊಂದು ಸಫಾರಿ ಮಾಡಲು ತೆರಳಿದ್ದ ವೇಳೆ ಆಕ್ರೋಶಗೊಂಡ ಆನೆಯೊಂದು ದಾಳಿ ನಡೆಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
Watch.. ಸಫಾರಿ ವಾಹನದ ಮೇಲೆ ದೈತ್ಯ ಆನೆಯ ದಾಳಿ: ದಿಕ್ಕೆಟ್ಟು ಓಡಿದ ಪ್ರವಾಸಿಗರು! - ಸಫಾರಿ ವಾಹನದ ಮೇಲೆ ದೈತ್ಯ ಆನೆಯ ದಾಳಿ
ದೈತ್ಯ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ನಡೆಸಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ ಸೆಲಾಟಿ ಗೇಮ್ ರಿಸರ್ವ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಫಾರಿಗೆ ತೆರಳುತ್ತಿದ್ದ ವೇಳೆ ಆನೆಗಳ ಹಿಂಡು ನೋಡುವ ಉದ್ದೇಶದಿಂದ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ, ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿದ್ದು, ವಾಹನ ನಜ್ಜುಗುಜ್ಜಾಗಿದೆ. ಇದರ ವಿಡಿಯೋ ಇಕೋಟ್ರೇನಿಂಗ್ ಗೈಡ್ಗಳ ಮೊಬೈಲ್ನಲ್ಲಿ ಸೆರೆಯಾಗಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಗಂಡು ಆನೆಯೊಂದು ಹೆಣ್ಣಾನೆ ಜೊತೆ ಲೈಂಗಿಕ ಆಕ್ರಮಣಶೀಲತೆಯಲ್ಲಿ ಭಾಗಿಯಾಗಿತ್ತು. ಈ ವೇಳೆ, ಪ್ರವಾಸಿಗರು ಸಫಾರಿ ವಾಹನ ನಿಲ್ಲಿಸಿರುವುದರಿಂದಲೇ ಅದು ದಾಳಿಗೆ ಮುಂದಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವು ಹಿಂಸಾತ್ಮಕವಾಗಿ ವರ್ತಿಸುವುದು ಸರ್ವೇ ಸಾಮಾನ್ಯ ಎಂಬುದಾಗಿ ತಿಳಿದು ಬಂದಿದೆ.