ETV Bharat Karnataka

ಕರ್ನಾಟಕ

karnataka

ETV Bharat / international

ಬಸ್​ ಮೇಲೆ ಗುಂಡಿನ ದಾಳಿ ನಡೆಸಿ ಬೆಂಕಿ ಹಚ್ಚಿದ ಜಿಹಾದಿಗಳು.. ಇಬ್ಬರು ಪೊಲೀಸರು ಸೇರಿ 19 ಅಮಾಯಕರ ಸಾವು! - ನೈಜರ್​ನಲ್ಲಿ ಬಸ್​ ಮೇಲೆ ದಾಳಿ

ಪ್ರಯಾಣಿಸುತ್ತಿದ್ದ ಬಸ್​ನ್ನು ಅಡ್ಡಗಟ್ಟಿದ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಲ್ಲದೇ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದು, 19 ಅಮಾಯಕರು ಬಲಿಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ನೈಜರ್​ ದೇಶದಲ್ಲಿ ನಡೆದಿದೆ.

Suspected jihadists kill Passengers in Niger, bus attack in Niger, Niger crime news, ನೈಜರ್​ನಲ್ಲಿ ಪ್ರಯಾಣಿಕರನ್ನು ಕೊಂದ ಶಂಕಿತ ಜಿಹಾದಿಗಳು, ನೈಜರ್​ನಲ್ಲಿ ಬಸ್​ ಮೇಲೆ ದಾಳಿ, ನೈಜರ್​ ಅಪರಾಧ ಸುದ್ದಿ,
ಬಸ್​ ಮೇಲೆ ಗುಂಡಿನ ದಾಳಿ ನಡೆಸಿ ಬೆಂಕಿ ಹಚ್ಚಿದ ಶಂಕಿತ ಜಿಹಾದಿಗಳು
author img

By

Published : Mar 18, 2022, 6:59 AM IST

ನಿಯಾಮಿ(ನೈಜರ್​) : ಶಂಕಿತ ಉಗ್ರರು ಚಲಿಸುತ್ತಿದ್ದ ಬಸ್​ ಅಡ್ಡಗಟ್ಟಿ, ಗುಂಡಿನ ದಾಳಿ ನಡೆಸಿ ಬಳಿಕ ಆ ಬಸ್​ಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿರುವ ಘಟನೆ ಪಶ್ಚಿಮ ನೈಜರ್‌ ಮತ್ತು ಬುರ್ಕಿನಾ ಫಾಸೊ ಗಡಿಯ ಸಮೀಪದಲ್ಲಿ ನಡೆದಿದೆ.

ಬುರ್ಕಿನಾ ಫಾಸೊದ ರಾಜಧಾನಿ ಔಗಾಡೌಗೌದಿಂದ ನೈಜರ್‌ನ ರಾಜಧಾನಿ ನಿಯಾಮಿಗೆ ಬಸ್​ ತೆರಳುತ್ತಿತ್ತು. ಈ ವೇಳೆ, ಬೈಕ್​ಗಳಲ್ಲಿ ಬಂದ ಅನೇಕ ಶಂಕಿತ ಜಿಹಾದಿಗಳು ಫೋನೊ ಗ್ರಾಮದ ಬಳಿ ಬಸ್ ಅಡ್ಡಗಟ್ಟಿದ್ದಾರೆ. ಬಳಿಕ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಕೆಲ ಪ್ರಯಾಣಿಕರು ದಾಳಿಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ಓದಿ:ಉಕ್ರೇನ್​​ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ

ಗುಂಡಿನ ದಾಳಿ ಬಳಿಕ ಉಗ್ರರು ಬಸ್​ಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 19 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಯಾಣಿಕರ ಸಾರಿಗೆ ಕಂಪನಿಗಳ ಸಂಘ ತಿಳಿಸಿದೆ. ಶಸ್ತ್ರಸಜ್ಜಿತ ಶಂಕಿತ ಜಿಹಾದಿಗಳು ಬಸ್​ ಮೇಲೆ ಅಲ್ಲದೇ ಕೆಲ ಟ್ರಕ್​ಗಳಿಗೂ ಬೆಂಕಿ ಹಚ್ಚಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಬಸ್​ ಮತ್ತು ಟ್ರಕ್​ಗಳು ಬೆಂಕಿಯಿಂದ ಉರಿಯುತ್ತಿರುವುದು ಕಂಡು ಬಂದಿದೆ ಎಂದು ಸಾರಿಗೆ ಕಂಪನಿಗಳು ಹೇಳಿವೆ.

ಯಾವುದೇ ಗುಂಪು ಈ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಎರಡಕ್ಕೂ ಸಂಬಂಧ ಹೊಂದಿರುವ ಜಿಹಾದಿಸ್ಟ್ ಗುಂಪುಗಳಿಂದ ಬುರ್ಕಿನಾ ಫಾಸೊ ಗಡಿಯ ಸಮೀಪವಿರುವ ತಿಲ್ಲಾಬೆರಿ ಪ್ರದೇಶದಲ್ಲಿ ಇದೇ ರೀತಿಯ ದಾಳಿಗಳು ಈ ಹಿಂದೆ ನಡೆದಿದ್ದಾವೆ. ಹೀಗಾಗಿ ಈ ದಾಳಿಗಳು ಈ ಎರಡು ಗುಂಪಗಳಲ್ಲೊಂದು ನಡೆಸಿದೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.


ABOUT THE AUTHOR

...view details