ನಿಯಾಮೆ(ನೈಜರ್):ಶಂಕಿತ ಇಸ್ಲಾಮಿಕ್ ತೀವ್ರವಾದಿಗಳು ದಾಳಿಗೆ ಕನಿಷ್ಠ 69 ಮಂದಿ ಸಾವನ್ನಪ್ಪಿರುವ ಘಟನೆ ನೈಜರ್ನ ರಾಜಧಾನಿ ನಿಯಾಮೆಯಿಂದ 155 ಮೈಲಿ ದೂರದಲ್ಲಿರುವ ಬಾನಿಬಂಗೌ ನಗರದ ಬಳಿ ಮಂಗಳವಾರ ನಡೆದಿದ್ದು, ಗೃಹ ಸಚಿವಾಲಯ ಗುರುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಸ್ವಯಂ ರಕ್ಷಣಾ ತಂಡದ ಮೇಲೆ ಇಸ್ಲಾಮಿಕ್ ತೀವ್ರವಾದಿಗಳು ದಾಳಿ ನಡೆಸಿದ್ದು, ನಗರದ ಮೇಯರ್ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಸ್ವಯಂ ರಕ್ಷಣಾ ತಂಡದ 15 ಮಂದಿ ಸದಸ್ಯರು ಸೇರಿ ಹಲವರು ಗಾಯಗೊಂಡಿದ್ದಾರೆ.
ಸ್ಥಳೀಯ ಸ್ವಯಂ ರಕ್ಷಣಾ ಗುಂಪುಗಳು ಇಸ್ಲಾಮಿಕ್ ತೀವ್ರವಾದಿಗಳ ವಿರುದ್ಧ ಹೋರಾಟಕ್ಕಾಗಿ ನೈಜರ್ ಸೇನೆಗೆ ಸಹಕರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ತೀವ್ರವಾದಿಗಳು ಐಎಸ್ ಉಗ್ರರ ನೆರವಿನಿಂದ ಜನರು ಮತ್ತು ಸ್ಥಳೀಯ ಸ್ವಯಂ ರಕ್ಷಣಾ ಗುಂಪುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.