ಖಾರ್ಟೌಮ್, ಸುಡಾನ್: ಪಶ್ಚಿಮ ಕೊರ್ಡೋಫಾನ್ ಪ್ರಾಂತ್ಯದಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 38 ಮಂದಿ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಡಾನ್ ದೇಶದ ಸರ್ಕಾರಿ ಸ್ವಾಮ್ಯದ ಈ ಗಣಿಯ ಸದ್ಯಕ್ಕೆ ಕಾರ್ಯನಿರ್ವಹಣೆ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದ್ದು, ಸುಡಾನ್ ರಾಜಧಾನಿ ಖಾರ್ಟೌಮ್‌ನ ದಕ್ಷಿಣಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಫುಜಾ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.
ದರ್ಸಾಯ ಎಂಬ ಗಣಿಯಲ್ಲಿ ದುರಂತ ಸಂಭವಿಸಿದ್ದು, ಸುಮಾರು ಎಂಟು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಥಳದಲ್ಲಿ ಎರಡು ಡ್ರೆಡ್ಜರ್‌ಗಳು ರಕ್ಷಣಾಕಾರ್ಯದಲ್ಲಿ ತೊಡಗಿಕೊಂಡಿರುವ, ಸ್ಥಳದಲ್ಲಿ ಜನರು ಜಮಾಯಿಸಿರುವ ಹಾಗೂ ಸತ್ತವರನ್ನು ಹೂಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿರುವ ಫೋಟೋಗಳನ್ನು ಗಣಿ ಕಂಪನಿ ತನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ:ಮೂವರು ಮಹಿಳೆಯರು ಮೂರು ನಂಬಿಕೆ ಒಂದೇ ಯೂನಿಫಾರ್ಮ್ ; ಇಸ್ರೇಲ್ ರಕ್ಷಣಾ ಪಡೆ ಟ್ವೀಟ್‌ಗೆ ಭಾರಿ ಮೆಚ್ಚುಗೆ