ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ಕೇಪ್ ಟೌನ್‌ನಲ್ಲಿ ಮಾಜಿ ಉಪ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ಅವರ ಗೌರವಾರ್ಥವಾಗಿ ರಾಜ್ಯ ಸ್ಮಾರಕ ಸೇವೆಯ ನಂತರ ರಾಮಫೋಸಾ ಅಸ್ವಸ್ಥಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ರಕ್ಷಣಾ ಪಡೆಯ ಮಿಲಿಟರಿ ಆರೋಗ್ಯ ಸೇವೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರಾಮಾಫೋಸಾ ಅವರು ಕೇಪ್ ಟೌನ್‌ನಲ್ಲಿ ಐಸೋಲೆಷನ್ಗೆ ಒಳಗಾಗಿದ್ದಾರೆ. ಮುಂದಿನ ವಾರದವರೆಗೆ ಎಲ್ಲಾ ಜವಾಬ್ದಾರಿಗಳನ್ನು ಉಪಾಧ್ಯಕ್ಷ ಡೇವಿಡ್ ಮಬುಜಾ ಅವರಿಗೆ ವಹಿಸಲಾಗಿದೆ.