ಜೋಹಾನ್ಸ್‌ಬರ್ಗ್: 'ಒಮಿಕ್ರೋನ್' ರೂಪಾಂತರ ಕೊರೊನಾ ಸೋಂಕಿನ ಕಾರಣಕ್ಕೆ ದಕ್ಷಿಣ ಆಫ್ರಿಕಾವನ್ನು ಪ್ರತ್ಯೇಕಿಸುವುದರಿಂದ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಈಗಾಗಲೇ, ಇತರ ರಾಷ್ಟ್ರಗಳಲ್ಲೂ ಈ ವೈರಸ್ ರೂಪಾಂತರ ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಅಬ್ದುಲ್-ಕರೀಮ್ ತಿಳಿಸಿದ್ದಾರೆ.
ಈಗಾಗಲೇ ಸುಮಾರು 20 ದೇಶಗಳು ದಕ್ಷಿಣ ಆಫ್ರಿಕಾ ಮತ್ತು ಅದರ ನೆರೆಯ ರಾಷ್ಟ್ರಗಳ ಮೇಲೆ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧ ಹೇರಿರುವ ಬಗ್ಗೆ ಅಬ್ದುಲ್-ಕರೀಮ್ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ 11 ದೇಶಗಳು ಒಮಿಕ್ರೋನ್ ಪ್ರಕರಣಗಳನ್ನು ವರದಿ ಮಾಡಿವೆ. ಆದ್ದರಿಂದ, ದಕ್ಷಿಣ ಆಫ್ರಿಕಾವನ್ನು ಪ್ರತ್ಯೇಕಿಸಲು ಪ್ರಯತ್ನಿಸುವುದರಿಂದ ವೈರಸ್ ಹರಡುವಿಕೆ ತಡೆಯಲು ನಿಜವಾಗಿಯೂ ಸಹಾಯ ಮಾಡುವುದಿಲ್ಲ. ಏಕೆಂದರೆ, ಶೀಘ್ರದಲ್ಲೇ ಇತರ ಹಲವು ದೇಶಗಳು ವೈರಸ್ ಹರಡುವ ಮಾರ್ಗಗಳಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.