ಲಾಗೋಸ್: ಕೆಲ ದಿನಗಳ ಹಿಂದೆ ಟ್ವಿಟರ್ ಬ್ಯಾನ್ ಮಾಡಿರುವ ನೈಜೀರಿಯಾ ಸರ್ಕಾರ, ದೇಶದ ಎಲ್ಲಾ ಟಿವಿ, ರೇಡಿಯೋ ಸ್ಟೇಶನ್ಗಳಿಗೆ ತಕ್ಷಣ ಟ್ವಿಟರ್ ಬಳಕೆ ನಿಲ್ಲಿಸುವಂತೆ ಸೂಚಿಸಿದೆ.
ನಿಷೇಧ ಹೇರಿದ ಮೇಲೂ ಟ್ವಿಟರ್ ಬಳಸುತ್ತಿರುವವರನ್ನು 'ದೇಶದ್ರೋಹಿಗಳು' ಎಂದು ಕರೆದಿರುವ ಸರ್ಕಾರ, ಮಾಧ್ಯಮ ಸಂಸ್ಥೆಗಳು ಸುದ್ದಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಟ್ವಿಟರ್ ಬಳಸುವುದನ್ನು ನಿಲ್ಲಿಸುವಂತೆ ಖಡಕ್ ಆದೇಶ ನೀಡಿದೆ.
ಮಾಧ್ಯಮ ಸಂಸ್ಥೆಗಳು ಟ್ವಿಟರ್ ಡಿ ಇನ್ಸ್ಟಾಲ್ (De-install Twitter) ಮಾಡಬೇಕು ಮತ್ತು ಮಾಹಿತಿ ಮೂಲವಾಗಿ ಬಳಸುವುದನ್ನು ನಿಲ್ಲಿಸಬೇಕು ಎಂದು ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಮಿಷನ್ (ಎನ್ಬಿಸಿ) ನಿರ್ದೇಶಕ ಆರ್ಮ್‌ಸ್ಟ್ರಾಂಗ್ ಇಡಾಚಾಬಾ ಆದೇಶಿಸಿದ್ದಾರೆ.