ನಿಯಾಮಿ (ನೈಜರ್):ಶಸ್ತ್ರ ಸಜ್ಜಿತ ಉಗ್ರರ ಗುಂಪೊಂದು ನೈಜರ್‌ನ ಎರಡು ಗ್ರಾಮಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 100 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಸಾವಿಗೆ ಸಂತಾಪ ಸೂಚಿಸಿರುವ ನೈಜರ್ ಸರ್ಕಾರ ರಾಷ್ಟ್ರಾದ್ಯಂತ ಮೂರು ದಿನಗಳ ಕಾಲ ಮೌನಾಚರಣೆ ಮಾಡುವಂತೆ ಕರೆ ನೀಡಿದೆ.
ಮಾಲಿ ಹಾಗೂ ನೈಜರ್ ಗಡಿಭಾಗದ ಚಾಮೊ-ಬಂಗೌ ಮತ್ತು ಜಾರೌಮ್‌ಡರೆ ಎಂಬ ಗ್ರಾಮಗಳ ಮೇಲೆ ಶನಿವಾರ ಉಗ್ರರು ದಾಳಿ ನಡೆಸಿದ್ದರು. ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನ ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸಿದ ದಿನವೇ ಉಗ್ರಯ ಈ ಕೃತ್ಯ ಎಸಗಿದ್ದರು.