ನವದೆಹಲಿ:ಆಫ್ರಿಕಾದ ಉತ್ತರ ಮೊಜಾಂಬಿಕ್ನ ಹಳ್ಳಿಯೊಂದರಲ್ಲಿ ಇಸ್ಲಾಮಿಕ್ ಉಗ್ರರು ಸುಮಾರು 50ಕ್ಕೂ ಹೆಚ್ಚು ಜನರ ಶಿರಚ್ಛೇದ ಮಾಡಿದ್ದಾರೆ ಎನ್ನಲಾಗಿದೆ.
ಉಗ್ರರು ಫುಟ್ಬಾಲ್ ಕ್ರೀಡಾಂಗಣವನ್ನು ಶಿರಚ್ಛೇದ ಮಾಡಲು ಬಳಸಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ ಗ್ರಾಮದ ಮೇಲೆ ದಾಳಿ ನಡೆಸಿದ ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇತರ ಗ್ರಾಮದಲ್ಲಿ ಇನ್ನೂ ಕೆಲವು ಜನರ ಶಿರಚ್ಛೇದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2017 ರಿಂದ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಉಗ್ರರು ಸರಣಿ ದಾಳಿ ನಡೆಸುತ್ತಿದ್ದಾರೆ.