ಕರ್ನಾಟಕ

karnataka

ETV Bharat / international

ನೈಜೀರಿಯಾದಲ್ಲಿ ಬಂದೂಕುಧಾರಿಗಳ ದಾಳಿಯಲ್ಲಿ 88 ಜನ ದಾರುಣ ಸಾವು - ನೈಜೀರಿಯಾದಲ್ಲಿ ಬಂದೂಕುಧಾರಿಗಳ ದಾಳಿ ಸುದ್ದಿ

ಬಂದೂಕುಧಾರಿಗಳ ದಾಳಿಯಲ್ಲಿ 88 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ದಾಳಿಗಳನ್ನು ತಡೆಯಲು ಭದ್ರತಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ನೈಜೀರಿಯಾದಲ್ಲಿ ಬಂದೂಕುಧಾರಿಗಳ ದಾಳಿ
ನೈಜೀರಿಯಾದಲ್ಲಿ ಬಂದೂಕುಧಾರಿಗಳ ದಾಳಿ

By

Published : Jun 6, 2021, 12:57 PM IST

ಲಾಗೋಸ್: ನೈಜೀರಿಯಾದ ವಾಯುವ್ಯ ರಾಜ್ಯವಾದ ಕೆಬ್ಬಿಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ 88 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಶನಿವಾರ ಖಚಿತಪಡಿಸಿದ್ದಾರೆ.

ರಾಜ್ಯದ ಡಾಂಕೊ-ವಾಸಾಗು ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿ ಗುರುವಾರ ಎಂಟು ವಿವಿಧ ಸಮುದಾಯಗಳ ಮೇಲೆ ಬಂದೂಕುಧಾರಿಗಳು ದಾಳಿ ಮಾಡಿದ್ದಾರೆ ಎಂದು ರಾಜ್ಯ ಪೊಲೀಸ್ ವಕ್ತಾರ ನಫಿಯು ಅಬೂಬಕರ್ ರಾಜ್ಯ ರಾಜಧಾನಿ ಬಿರ್ನಿನ್ ಕೆಬ್ಬಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಹೆಚ್ಚಿನ ದಾಳಿಗಳನ್ನು ತಡೆಯಲು ಭದ್ರತಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಏಪ್ರಿಲ್ ಅಂತ್ಯದಲ್ಲಿ, ಬಂದೂಕುಧಾರಿಗಳ ದಾಳಿಯನ್ನು ಹಿಮ್ಮೆಟ್ಟಿಸುವಾಗ ಒಂಬತ್ತು ಪೊಲೀಸರು ಮತ್ತು ಕೆಬ್ಬಿಯಲ್ಲಿನ ನಾಗರಿಕ ರಕ್ಷಣಾ ಗುಂಪಿನ ಇಬ್ಬರು ಸದಸ್ಯರು ಕೊಲ್ಲಲ್ಪಟ್ಟಿದ್ದರು.

ABOUT THE AUTHOR

...view details