ಕರ್ನಾಟಕ

karnataka

ETV Bharat / international

ನೈಜೀರಿಯಾದಲ್ಲಿ ಪೊಲೀಸ್​ ಹತೈಗೈದು ಶಿಕ್ಷಕರು, ವಿದ್ಯಾರ್ಥಿಗಳ ಅಪಹರಣ - Federal Government College in Birnin Yauri

ಕೆಲವು ದಿನಗಳಿಂದ ನೈಜೀರಿಯಾದಲ್ಲಿ ದುಷ್ಕರ್ಮಿಗಳು ಶಾಲೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. 2020ರ ಡಿಸೆಂಬರ್​ನಿಂದ ಇಲ್ಲಿಯವರೆಗೆ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗನ್​ಮ್ಯಾನ್​ಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

Gunmen attack Nigerian school
ಶಾಲೆ ಮೇಲೆ ದಾಳಿ

By

Published : Jun 18, 2021, 9:00 AM IST

ಅಬುಜಾ (ನೈಜೀರಿಯಾ):ನೈಜೀರಿಯಾದ ವಾಯುವ್ಯ ರಾಜ್ಯವಾದ ಕೆಬ್ಬಿಯಲ್ಲಿರುವ ಶಾಲೆಯ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಪೊಲೀಸ್​​ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದು ಅನೇಕ ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರನ್ನು ಅಪಹರಿಸಿದ್ದಾರೆ.

ಬಿರ್ನಿನ್ ಯೌರಿ ಪ್ರದೇಶದಲ್ಲಿರುವ ಫೆಡರಲ್ ಸರ್ಕಾರಿ ಕಾಲೇಜಿಗೆ (ಮಾಧ್ಯಮಿಕ ಶಾಲೆ) ಹತ್ತಿರದ ಅರಣ್ಯ ಪ್ರದೇಶದಿಂದ ಬಂದ ಗನ್​ಮ್ಯಾನ್​ಗಳು ನುಗ್ಗಿದ್ದಾರೆ. ಶಾಲೆಯ ಕಾವಲು ಕಾಯುತ್ತಿದ್ದ ಪೊಲೀಸರೊಂದಿಗೆ ಗುಂಡಿಕಿ ಕಾಳಗ ನಡೆಸಿದ್ದು, ಈ ವೇಳೆ ಓರ್ವ ಪೊಲೀಸ್​ ಸಿಬ್ಬಂದಿ ಮೃತಪಟ್ಟಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ಕೆಬ್ಬಿಯ ಪೊಲೀಸ್ ವಕ್ತಾರ ನಫಿಯು ಅಬೂಬಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ನೈಜೀರಿಯಾ ಶಾಲೆಯ ಮೇಲೆ ಉಗ್ರರ ದಾಳಿ: 150 ವಿದ್ಯಾರ್ಥಿಗಳ ಅಪಹರಣ

ಓರ್ವ ಶಿಕ್ಷಕಿ ಹಾಗೂ ನಾಲ್ವರು ಪುರುಷ ಶಿಕ್ಷಕರನ್ನು ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ಅಪಹರಿಸಿದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಚುರುಕುಗೊಳಿಸಲಾಗಿದೆ ಎಂದು ಅಬೂಬಕರ್ ಹೇಳಿದ್ದಾರೆ.

ನೈಜೀರಿಯಾವು ಕೆಲ ದಿನಗಳಿಂದ ಶಾಲೆಗಳ ಮೇಲಿನ ದಾಳಿ ಮತ್ತು ವಿದ್ಯಾರ್ಥಿಗಳ ಅಪಹರಣ ಸೇರಿದಂತೆ ಸರಣಿ ದಾಳಿಗಳಿಗೆ ಸಾಕ್ಷಿಯಾಗಿದೆ. ಕಳೆದ ತಿಂಗಳು ನೈಜೆರ್​ನ ಇಸ್ಲಾಮಿಕ್ ಸ್ಕೂಲ್ ಮೇಲೆ ಉಗ್ರರ ಗುಂಪು ದಾಳಿ ನಡೆಸಿ, 150 ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್​ ಮಾಡಿದ್ದರು. 2020ರ ಡಿಸೆಂಬರ್​ನಿಂದ ಇಲ್ಲಿಯವರೆಗೆ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗನ್​ಮ್ಯಾನ್​ಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details