ಔಗಾಡೌಗೌ, ಬುರ್ಕಿನಾ ಫಾಸೊ: ಚಿನ್ನದ ಗಣಿಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ, ಸುಮಾರು 59 ಮಂದಿ ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುರ್ಕಿನಾ ಫಾಸೊ ರಾಷ್ಟ್ರದ ನೈರುತ್ಯ ಭಾಗದಲ್ಲಿ ಜರುಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗ್ಯಾಂಬ್ಲೋರಾ ಗ್ರಾಮದಲ್ಲಿ ಈ ಸ್ಫೋಟ ಸಂಭವಿದಿದೆ. ಗಣಿ ಪ್ರದೇಶದಲ್ಲಿ ಚಿನ್ನವನ್ನು ಸಂಸ್ಕರಿಸಲು ಬಳಸಲಾದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಆರ್ಟಿಬಿ ವರದಿ ಮಾಡಿದೆ.
ಸ್ಫೋಟ ಭಯಾನಕವಾಗಿತ್ತು. ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ಸ್ಫೋಟದ ಸಮಯದಲ್ಲಿ ಸ್ಥಳದಲ್ಲಿದ್ದ ಅರಣ್ಯ ಸಂರಕ್ಷಣಾಧಿಕಾರಿ ಸಂಸನ್ ಕಂಬೌ ಅವರು ದೂರವಾಣಿ ಮೂಲಕ ಅಸೋಸಿಯೇಟೆಡ್ ಪ್ರೆಸ್ ಸ್ಪಷ್ಟನೆ ನೀಡಿದ್ದಾರೆ.
ಗಣಿಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಅದಾದ ನಂತರ ಕೆಲವೇ ನಿಮಿಷಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಸಂಸನ್ ಕಂಬೌ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಬಿಕ್ಕಟ್ಟು: ರಷ್ಯಾ ಮೇಲೆ ಅಮೆರಿಕ ನಿರ್ಬಂಧ