ವಾಷಿಂಗ್ಟನ್: ಹೊಸ ವರ್ಷವು ಹೊಸ ಭರವಸೆ, ಕನಸು ಮತ್ತು ಬೆಳಕನ್ನು ಹೊತ್ತು ತಂದಿದೆ. ಇದೇ ವೇಳೆ, 2022ರ ಮೊದಲ ಸೂರ್ಯೋದಯದ ಫೋಟೋಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ. ಈ ಫೋಟೋಗಳನ್ನು ಐಎಸ್‌ಎಸ್ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದ 2022ರ ಮೊದಲ ಸೂರ್ಯೋದಯದ ಫೋಟೋ
2022ರ ಹೊಸ ವರ್ಷದ ಮೊದಲ ದಿನದ ಸೂರ್ಯೋದಯವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೆರೆ ಹಿಡಿದಿದ್ದು, ವೈರಲ್ ಆಗಿದೆ.
2022ರ ಮೊದಲ ಸುರ್ಯೋದಯ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್
ಈ ಫೋಟೋಗಳೊಂದಿಗೆ, ಹೊಸ ವರ್ಷದ ಶುಭಾಶಯಗಳು ಎಂದು ಶೀರ್ಷಿಕೆ ನೀಡಲಾಗಿದೆ. ISS ಸಿಬ್ಬಂದಿ ದಿನಕ್ಕೆ 16 ಸೂರ್ಯೋದಯಗಳನ್ನು ನೋಡುತ್ತಾರೆ. ಆದರೆ, 2022ರ ಮೊದಲ ದಿನದಂದು ಕಾಣುವ ಸುಂದರ ಸೂರ್ಯೋದಯದ ಫೋಟೋಗಳು ಖಂಡಿತವಾಗಿಯೂ ನಿಮ್ಮನ್ನು ಮೋಡಿ ಮಾಡುತ್ತವೆ ಎಂದು ಹೇಳಿದೆ.
ಇದನ್ನೂ ಓದಿ:ಲಸಿಕೆ ಪಡೆಯದವರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ಇಲ್ಲ: ಯುಎಇ ನಿರ್ಬಂಧ