ನೈರೋಬಿ(ಕೀನ್ಯಾ):ಪ್ರಾಣಿಗಳಿಂದ ಮಾನವ ಕಲಿಯುವುದು ಸಾಕಷ್ಟಿದೆ. ಪರಸ್ಪರ ದ್ವೇಷ, ಅಸೂಯೆಗಳಿಂದ ಶಾಂತಿ, ನೆಮ್ಮದಿ ಕಳೆದುಕೊಂಡಿರುವ ಮನುಷ್ಯನಿಗೆ ಕೆಲವು ಬಾರಿ ಪ್ರಾಣಿಗಳು ಸಾಮರಸ್ಯದ ಪಾಠ ಹೇಳುತ್ತವೆ.
ಶೆಲ್ಡ್ರಿಕ್ ವೈಲ್ಡ್ಲೈಫ್ ಎಂಬ ಸಂಘಟನೆಯೊಂದು ಟ್ವಿಟರ್ನಲ್ಲಿ ಅಪರೂಪದ ಈ ವಿಡಿಯೋ ಹಂಚಿಕೊಂಡಿದ್ದು, ಜನರ ಮನಸ್ಸು ಗೆದ್ದಿದೆ. ಈ ವಿಡಿಯೋದಲ್ಲಿ ಆನೆಯೊಂದು ಎಮ್ಮೆಯ ಜೊತೆ ಆಟವಾಡುವ ದೃಶ್ಯ ಮನೋಹರವಾಗಿದೆ.
'ಈ ವಿಡಿಯೋದಲ್ಲಿರುವ ಇವಿಯಾ ಹೆಸರಿನ ಎಮ್ಮೆ ಹಾಗು ನೊಟ್ಟೋ ಎಂಬ ಆನೆ ಎರಡೂ ಕೂಡಾ ಅನಾಥ ಪ್ರಾಣಿಗಳು. ಅವುಗಳನ್ನು ನಾವು ಸಾಕಿಕೊಂಡಿದ್ದೆವು. ಎರಡು ವಿಭಿನ್ನ ಪ್ರಭೇದದ ಜೀವಿಗಳು ಸಾಮಾನ್ಯವಾಗಿ ಬೇರೆ ಬೇರೆಯಾಗಿಯೇ ಬಾಳುತ್ತವೆ. ಆದರೆ ಅವುಗಳು ಪರಸ್ಪರ ಸ್ನೇಹದಿಂದ ಇರುವುದು ಅಚ್ಚರಿ ಮೂಡಿಸಿದೆ' ಎಂದು ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ವೀಟ್ ಮಾಡಿದೆ.
ಶೆಲ್ಡ್ರಿಕ್ ವೈಲ್ಡ್ಲೈಫ್ ಕೀನ್ಯಾದಲ್ಲಿರುವ ಪ್ರಾಣಿಗಳ ರಕ್ಷಣೆ ಮಾಡುವ ಸಂಘಟನೆಯಾಗಿದ್ದು, ಅದರಲ್ಲೂ ಹೆಚ್ಚಾಗಿ ಆನೆಗಳ ಬಗ್ಗೆ ಗಮನಹರಿಸುತ್ತದೆ.
ಇದನ್ನೂ ಓದಿ:ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ: ಶ್ರೀಲಂಕಾದಲ್ಲಿ ಅಪರೂಪದ ವಿಸ್ಮಯ