ಕೇಪ್ಟೌನ್(ದಕ್ಷಿಣ ಆಫ್ರಿಕಾ) :ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್ನ 'ಒಮಿಕ್ರಾನ್' ರೂಪಾಂತರದ ವಿರುದ್ಧ ಈಗಿರುವ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವರು ಹೇಳಿದ್ದಾರೆ.
B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ
ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಅವರ ಪ್ರಕಾರ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಇನ್ನೂ ತೀವ್ರವಾದ ಕೋವಿಡ್ ರೂಪಾಂತರದಿಂದ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ. ಅಲ್ಲದೇ ಅನುವಂಶಿಕ ಸಂಯೋಜನೆಯಿಂದಾಗಿ ಇದರ ಹರಡುವಿಕೆ ಪ್ರಮಾಣ ಹೆಚ್ಚಿರಬಹುದು.
ಫೈಝರ್, ಮಾಡರ್ನಾ, ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಸ್ಟ್ರಾಜೆನೆಕಾ ಸೇರಿದಂತೆ ವಿಶ್ವದ ಪ್ರಮುಖ ಕೋವಿಡ್ ಲಸಿಕಾ ತಯಾರಕರು ತಮ್ಮ ಲಸಿಕೆಗಳು ಒಮಿಕ್ರೋನ್ ವಿರುದ್ಧ ಹೋರಾಡುತ್ತವೆಯೇ ಇಲ್ಲವೇ ಎಂಬ ಬಗ್ಗೆ ತನಿಖೆ ಪ್ರಾರಂಭಿಸಿವೆ.