ಕೈರೋ(ಈಜಿಪ್ಟ್): 16 ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾದ ಘಟನೆ ಈಜಿಪ್ಟ್‌ನ ಐನ್ ಸೊಖ್ನಾ ಬಳಿ ನಡೆದಿದೆ. ಬಸ್ ಮತ್ತು ಟ್ರಕ್ ಮಧ್ಯೆ ಸಂಭವಿಸಿದ ಈ ಅಪಘಾತದಲ್ಲಿ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ.
ಈಜಿಪ್ಟ್ನಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತ: 22 ಮಂದಿ ದುರ್ಮರಣ - ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತ
ಈಜಿಪ್ಟ್ನಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ ಎಂದು ಅಲ್ಲಿನ ಭಾರತೀಯ ರಾಯಭಾರ ಇಲಾಖೆ ಟ್ವೀಟ್ ಮಾಡಿದೆ.
![ಈಜಿಪ್ಟ್ನಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತ: 22 ಮಂದಿ ದುರ್ಮರಣ ಈಜಿಪ್ಟ್ನಲ್ಲಿ ಬಸ್ ಅಪಘಾತ,Bus with 16 Indian tourists crashes in Egypt](https://etvbharatimages.akamaized.net/etvbharat/prod-images/768-512-5526558-thumbnail-3x2-brm.jpg)
ಈ ಬಗ್ಗೆ ಈಜಿಪ್ಟ್ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. 16 ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಇದರಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಕೈರೋ ಮತ್ತು ಸೂಯೆಜ್ ನಗರದ ಆಸ್ಪತ್ರೆಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ನಂಬರ್ಗಳನ್ನ ನೀಡಲಾಗಿದೆ.
ಪೋರ್ಟ್ ಸೈಡ್-ಡಾಮಿಯೆಟ್ಟಾ ಹೆದ್ದಾರಿಯಲ್ಲಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಓರ್ವ ಭಾರತೀಯ ಸೇರಿ 22 ಜನ ಮೃತಪಟ್ಟಿದ್ದು, 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಈಜಿಪ್ಟ್‌ನ ಪತ್ರಿಕೆಯೊಂದು ವರದಿ ಮಾಡಿದೆ.