ಗ್ಯಾಬೊರೊನ್ (ಬೋಟ್ಸ್ವಾನ):ದಕ್ಷಿಣ ಆಫ್ರಿಕಾದಬೋಟ್ಸ್ವಾನ ರಾಷ್ಟ್ರದ ಜನಪ್ರಿಯ ಒಕಾವಾಂಗೊ ಡೆಲ್ಟಾ ಪ್ರದೇಶದಲ್ಲಿ ಇತ್ತೀಚಿಗೆ ದೊರೆತಿರುವ 275 ಆನೆಗಳ ಮೃತದೇಹಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೋಟ್ಸ್ವಾನ ಹೇಳಿದೆ.
275 ಆನೆಗಳ ನಿಗೂಢ ಸಾವಿನ ಕುರಿತು ತನಿಖೆ ಆರಂಭ - ಒಕಾವಾಂಗೊ ಡೆಲ್ಟಾ ಪ್ರದೇಶ
ಒಕಾವಾಂಗೊ ಡೆಲ್ಟಾ ಪ್ರದೇಶದಲ್ಲಿ ಆನೆಗಳ ನಿಗೂಢ ಸಾವಿನ ತನಿಖೆಗೆ ಎಂದು ಅಗತ್ಯ ಸಿಬ್ಬಂದಿ ಮತ್ತು ವಿಮಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಬೋಟ್ಸ್ವಾನದ ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನಗಳ ಇಲಾಖೆ ತಿಳಿಸಿದೆ.
delta
ಆನೆಗಳ ನಿಗೂಢ ಸಾವಿನ ತನಿಖೆಗೆ ಸಿಬ್ಬಂದಿ ವರ್ಗ ಮತ್ತು ವಿಮಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನಗಳ ಇಲಾಖೆ ತಿಳಿಸಿದೆ.
ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೆನಡಾದ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆ ನಡೆಯುತ್ತಿದೆ ಎಂದು ಇಲಾಖೆಯ ಕಾರ್ಯಕಾರಿ ನಿರ್ದೇಶಕ ಲ್ಯೂಕಾಸ್ ಟಾಲೊ ಹೇಳಿದ್ದಾರೆ.