ಕರ್ನಾಟಕ

karnataka

ETV Bharat / international

ಕಾಂಗೋ ನದಿಯಲ್ಲಿ ಮಗುಚಿದ ಹಡಗು: 50 ಕ್ಕೂ ಹೆಚ್ಚು ಮಂದಿ ಜಲಸಮಾಧಿ.. 70 ಕ್ಕೂ ಅಧಿಕ ಜನರು ನಾಪತ್ತೆ - Boat capsizes

ಕಾಂಗೋ ನದಿಯಲ್ಲಿ ಹಡಗೊಂದು ಮಗುಚಿದ ಪರಿಣಾಮ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

ಕಾಂಗೋ ನದಿ
ಕಾಂಗೋ ನದಿ

By

Published : Oct 9, 2021, 10:33 PM IST

ಕಿನ್ಶಾಸಾ(ಕಾಂಗೊ):ದಕ್ಷಿಣ ಆಫ್ರಿಕಾದ ಕಾಂಗೋ ನದಿಯಲ್ಲಿ ಹಡಗೊಂದು ಮಗುಚಿದ ಪರಿಣಾಮ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಡೆಮಾಕ್ರಟಿಕ್​ ರಿಪಬ್ಲಿಕ್​ ಆಫ್​​ ದಿ ಕಾಂಗೋದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈವರೆಗೆ 51 ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, 70 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅವರೆಲ್ಲರೂ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಮಂಗೋಲಾದ ವಾಯುವ್ಯ ಪ್ರಾಂತ್ಯದ ಗವರ್ನರ್​ ಕಚೇರಿಯ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ವಾರದ ಆರಂಭದಲ್ಲೇ ಹಡಗು ಮುಳುಗಿದ್ದು, ಈವರೆಗೆ 39 ಜನರನ್ನು ರಕ್ಷಿಸಲಾಗಿದೆ. ಹಡಗಿನಲ್ಲಿ ಎಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು ಎಂಬ ನಿಖರ ಮಾಹಿತಿ ಇಲ್ಲ. ಸಾಮರ್ಥ್ಯಕ್ಕಿಂತ ಅಧಿಕ ಜನರು ತುಂಬಿದ್ದರಿಂದ ಹಡಗು ಮಗುಚಿದೆ ಎನ್ನಲಾಗಿದೆ. ಅಂದು ವಾತಾವರಣ ಕೂಡ ಕೆಟ್ಟದಾಗಿದ್ದರಿಂದ ಘಟನೆಗೆ ನಿಖರವಾದ ಕಾರಣ ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಶೀಘ್ರದಲ್ಲೇ ಘಟನೆಗೆ ಕಾರಣ ಏನೆಂಬುದನ್ನು ಕಂಡು ಹಿಡಿಯಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಮಂಗೋಲಾದ ಪ್ರಾಂತ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಸಲಾಗಿದೆ.

ABOUT THE AUTHOR

...view details