ಕೈರೋ: ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನರಾಗಿದ್ದು, ಇದಕ್ಕೆ ಸಂಬಂಧಿಸಿಂದತೆ ಬಹ್ರೇನ್ ರಾಯಲ್ ಕೋರ್ಟ್ ಮಾಹಿತಿ ಹಂಚಿಕೊಂಡಿದೆ. ಯುಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಹ್ರೇನ್ ಪ್ರಧಾನಿಗೆ 84 ವರ್ಷ ವಯಸ್ಸಾಗಿತ್ತು. ಕೊರೊನಾ ವೈರಸ್ ಇರುವ ಕಾರಣ ಕಡಿಮೆ ಸಂಬಂಧಿಕರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ನಿಧನ - ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಇನ್ನಿಲ್ಲ
1971ರಲ್ಲಿ ಬಹ್ರೇನ್ಗೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಅವರು, ವಿಶ್ವದಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.
![ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ನಿಧನ Bahrain Prime Minister Khalifa](https://etvbharatimages.akamaized.net/etvbharat/prod-images/768-512-9510573-thumbnail-3x2-wdfdfd.jpg)
Bahrain Prime Minister Khalifa
ಇದೀಗ ಒಂದು ವಾರಗಳ ಕಾಲ ಶೋಕಾಚರಣೆ ಘೋಷಣೆ ಮಾಡಿ ಬಹ್ರೇನ್ ದೊರೆ ಹಮೀದ್ ಬಿನ್ ಆದೇಶ ಹೊರಡಿಸಿದ್ದಾರೆ. ಇನ್ನು ಇಸ್ರೇಲ್ ಪ್ರಧಾನಿ ಸೇರಿ ಅನೇಕ ರಾಷ್ಟ್ರಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.