ಅಬುಜಾ, ನೈಜೀರಿಯಾ: ಬೈಕ್ಗಳಲ್ಲಿ ಬಂದ ಬಂಡುಕೋರರು ಗುಂಡು ಹಾರಿಸಿ ಸುಮಾರು 43 ಮಂದಿಯನ್ನು ಕೊಂದಿರುವ ಘಟನೆ ನೈಜೀರಿಯಾದ ವಾಯವ್ಯ ರಾಜ್ಯವಾದ ಸೊಕೊಟೊದಲ್ಲಿ ನಡೆದಿದೆ ಎಂದ ಏಜೆನ್ಸ್ ಫ್ರಾನ್ಸ್ ಪ್ರೆಸ್ಸೆ ವರದಿ ಮಾಡಿದೆ.
ಗೊರೊನ್ವೋ ಗ್ರಾಮದಲ್ಲಿ ಭಾನುವಾರ ಬಂಡುಕೋರರು ನಡೆಸಿದ ದಾಳಿಯಲ್ಲಿ ಸುಮಾರು 43 ಮಂದಿ ಮೃತಪಟ್ಟಿರುವುದು ದೃಢವಾಗಿದೆ ಎಂದು ಸೊಕೊಟೊ ಸರ್ಕಾರದ ವಕ್ತಾರ ಮೊಹಮ್ಮದ್ ಬೆಲ್ಲೋ ಹೇಳಿದ್ದಾರೆ ಎಂದು ಏಜೆನ್ಸ್ ಫ್ರಾನ್ಸ್ ಪ್ರೆಸ್ಸೆ ವರದಿ ಮಾಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ಉಲ್ಲೇಖಿಸಿದೆ.
ಸೋಮವಾರ ಬೆಳಗ್ಗೆ ಈ ಬಗ್ಗೆ ವರದಿ ಮಾಡಿರುವ ಸ್ಥಳೀಯ ಪತ್ರಿಕೆ ಪ್ರೀಮಿಯಮ್ ಟೈಮ್ಸ್, ಗ್ರಾಮದಲ್ಲಿ ಮಾರುಕಟ್ಟೆ ನಡೆಯುತ್ತಿದ್ದ ವೇಳೆ ದಾಳಿ ನಡೆದಿದ್ದು, 30 ಮಂದಿ ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಸುಮಾರು 200 ಮಂದಿಯ ಗುಂಪು ಬೈಕ್ಗಳಲ್ಲಿ ಬಂದು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದೆ.
ಇದಕ್ಕೂ ಮೊದಲು ಬೇರೊಂದು ಗ್ರಾಮದ ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದ ಬಂಡುಕೋರರು, 19 ಮಂದಿಯನ್ನು ಕೊಂದಿದ್ದರು. ಸುಮಾರು ವರ್ಷಗಳಲ್ಲಿ ಈ ರಾಷ್ಟ್ರದಲ್ಲಿ ಹಿಂಸಾಚಾರಗಳು ನಡೆಯುತ್ತಿದ್ದು, ಬೋಕೋ ಹರಾಮ್ ಮುಂತಾದ ಬಂಡುಕೋರರು ಇಲ್ಲಿ ಆಗಾಗ ದಾಳಿ ನಡೆಸುತ್ತಿರುತ್ತವೆ.
ಇದನ್ನೂ ಓದಿ:ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರಿದ ದಾಳಿ.. 66 ಮನೆ ಧ್ವಂಸ, 20 ಮನೆಗಳಿಗೆ ಬೆಂಕಿ