ಟುನಿಶ್(ಆಫ್ರಿಕಾ) : ಇಲ್ಲಿನ ಕರಾವಳಿಯಲ್ಲಿ ಬೋಟ್ ಮುಳುಗಿ 43 ವಲಸಿಗರು ನೀರು ಪಾಲಾಗಿರುವ ಘಟನೆ ಶನಿವಾರ ನಡೆದಿದೆ. 84 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಟುನೇಶಿಯಾ ರೆಡ್ ಕ್ರಸೆಂಟ್ ಹೇಳಿದೆ.
ಟುನೇಶಿಯಾ ರೆಡ್ ಕ್ರಸೆಂಟ್ ಮುಖ್ಯಸ್ಥ ಮೊಂಗಿ ಸ್ಲಿಮ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 127 ವಲಸಿಗರನ್ನು ಹೊತ್ತ ಬೋಟ್ ಶುಕ್ರವಾರ ಲಿಬಿಯಾದ ಕರಾವಳಿ ನಗರವಾದ ಜುವಾರಾದಿಂದ ಹೊರಟು ಮೆಡಿಟರೇನಿಯನ್ ಸಮುದ್ರವನ್ನು ದಾಟಿ, ಇಟಲಿ ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ಟುನೇಶಿಯಾ ಕರಾವಳಿಯಲ್ಲಿ ಮುಳುಗಡೆಯಾಗಿದೆ. ದುರಂತಕ್ಕೀಡಾದ ಬೋಟ್ನಲ್ಲಿ ಸುಡಾನ್ನ 46, ಎರಿಟ್ರಿಯಾದ 16 ಮತ್ತು ಬಂಗಾಳದ 16 ವಲಸಿಗರು ಇದ್ದರು ಎಂದು ತಿಳಿದುಬಂದಿದೆ.