ಅರ್ಜೆಂಟೀನಾ:ಕೋವಿಡ್ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅರ್ಜೆಂಟೀನಾದಲ್ಲಿ 1,00,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಸುಮಾರು 614 ಜನರು ಕೋವಿಡ್ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,00,250ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಕುರಿತು ಪ್ರಕ್ರಿಯಿಸಿರುವ ಜೆರೊಂಟಾಲಜಿಯಲ್ಲಿ ಪರಿಣತಿ ಹೊಂದಿರುವ ಮತ್ತು ಸರ್ಕಾರದ ಸಾಂಕ್ರಾಮಿಕ ರೋಗದ ಸಲಹೆಗಾರರಾದ ಲೂಯಿಸ್ ಕ್ಮೆರಾ, ನಾನು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಇಂತಹ ಪರಿಸ್ಥಿತಿ ಸಂಭವಿಸುತ್ತದೆಯೆಂದು ನಾನು ಭಾವಿಸಿರಲಿಲ್ಲ. ಇದು ಸಂಕಷ್ಟದ ಸಮಯವಾಗಿದೆ. ಲಾಕ್‌ಡೌನ್ ಸಮಯದಲ್ಲಿನ ದೋಷಗಳು ಮತ್ತು ವೈರಸ್ ರೂಪಾಂತರಗಳಿಂದ ಹೆಚ್ಚು ಸಾವುಗಳು ಸಂಭವಿಸಿವೆ.
ಮಾರ್ಚ್ ಅಂತ್ಯದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಆಕ್ರಮಣಕಾರಿ ರೂಪಾಂತರಗಳೊಂದಿಗೆ ಬಹಬೇಗ ವ್ಯಾಪಿಸಿತು. ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಅರ್ಜೆಂಟೀನಾ ಆರ್ಥಿಕವಾಗಿ ಹೆಣಗಾಡುತ್ತಿತ್ತು. ಜೊತೆಗೆ ಅನೇಕ ನಾಗರಿಕರು ಕ್ವಾರಂಟೈನ್ ನಿಯಮವನ್ನು ಕಡೆಗಣಿಸಿದರು. ನಂತರ ಕ್ರಿಸ್‌ಮಸ್ ರಜಾದಿನಗಳು ಮತ್ತು ಅರ್ಜೆಂಟೀನಾದ ದಕ್ಷಿಣ ಗೋಳಾರ್ಧದ ಬೇಸಿಗೆ ಕೂಟಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಯಿತು. ಈ ವೇಳೆ ಜನರು ಮಾಸ್ಕ್ ಧರಿಸದೇ ಒಟ್ಟಿಗೆ ಸಮಯ ಕಳೆದಿದ್ದರಿಂದ ಸೋಂಕು ವ್ಯಾಪಿಸಿತು. ಜೊತೆಗೆ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಯತ್ನವೂ ಹಿಂದುಳಿದಿದೆ ಎಂದು ಕ್ಮೆರಾ ತಿಳಿಸಿದರು.
ಅಮೆರಿಕದಲ್ಲಿ 6 ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ