ಕರ್ನಾಟಕ

karnataka

ETV Bharat / international

ಕಾಂಗೋ ನದಿಯಲ್ಲಿ ಮುಳುಗಿದ ಬೋಟ್​: 60 ಮಂದಿ ನೀರುಪಾಲು - ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

700 ಮಂದಿ ಪ್ರಯಾಣಿಕರಿದ್ದ ಬೋಟ್ ಕಾಂಗೋ ನದಿಯಲ್ಲಿ ಮುಳುಗಿ 60 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Congo river
ಕಾಂಗೋ ನದಿಯಲ್ಲಿ ಮುಳುಗಿದ ಬೋಟ್

By

Published : Feb 16, 2021, 5:25 PM IST

ಬುಟೆಂಬೊ:ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಮಾಯ್ - ನೊಂಬೆ ಪ್ರಾಂತ್ಯದಲ್ಲಿರುವ ಕಾಂಗೋ ನದಿಯಲ್ಲಿ ಬೋಟ್ ಮುಳುಗಿ 60 ಜನರು ಸಾವನ್ನಪ್ಪಿದ್ದಾರೆ.

ಸುಮಾರು 700 ಮಂದಿ ಇದ್ದ ಬೃಹತ್​ ಗಾತ್ರದ ಬೋಟ್​​ ಇದಾಗಿದ್ದು, 300 ಜನರನ್ನು ರಕ್ಷಿಸಲಾಗಿದೆ. 60 ಮಂದಿಯ ಮೃತದೇಹಗಳು ಸಿಕ್ಕಿದ್ದು, ಉಳಿದವರಿಗಾಗಿ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಿನ್ಶಾಸಾದಿಂದ ಈಕ್ವೇಟರ್ ಪ್ರಾಂತ್ಯಕ್ಕೆ ಈ ಬೋಟ್​ ತೆರಳುತ್ತಿತ್ತು. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾಲುವೆಗೆ ಉರುಳಿಬಿತ್ತು 54 ಪ್ರಯಾಣಿಕರಿದ್ದ ಬಸ್​.. ಸಾವಿನ ಸಂಖ್ಯೆ 42ಕ್ಕೆ ಏರಿಕೆ - ಪರಿಹಾರ ಘೋಷಿಸಿದ ಪಿಎಂ

ಮಿತಿಮೀರಿದ ಸರಕುಗಳು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬೋಟ್​ ಏರಿದ್ದರಿಂದ ಈ ಬೋಟ್​ ಮುಳುಗಲು ಕಾರಣ ಎಂದು ಅಲ್ಲಿನ ಸಚಿವರೊಬ್ಬರು ಹೇಳಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details