ಕರ್ನಾಟಕ

karnataka

ETV Bharat / international

ಅಧ್ಯಕ್ಷೀಯ ಚುನಾವಣೆ ಹೊಸ್ತಿಲಲ್ಲಿ ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐವರು ಬಲಿ - ಸೊಮಾಲಿಯಾ ಅಧ್ಯಕ್ಷೀಯ ಚುನಾವಣೆ

ಫೆಬ್ರವರಿ 8 ರಂದು ಸೊಮಾಲಿಯಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇಂದು ಸರ್ಕಾರಿ ಅಧಿಕಾರಿಗಳು ತೆರಳಿದ್ದ ಹೋಟೆಲ್‌ ಬಳಿ ಆತ್ಮಾಹುತಿ ಬಾಂಬ್​ ದಾಳಿ ನಡೆದಿದೆ.

suicide bombing
ಆತ್ಮಾಹುತಿ ಬಾಂಬ್​ ದಾಳಿ

By

Published : Feb 1, 2021, 4:01 PM IST

ಮೊಗಾಡಿಶು:ಸೊಮಾಲಿಯಾ ರಾಜಧಾನಿ ಮೊಗಾಡಿಶುನಲ್ಲಿ ಸರ್ಕಾರಿ ಅಧಿಕಾರಿಗಳು ತೆರಳಿದ್ದ ಹೋಟೆಲ್‌ ಬಳಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

'ಅಲ್-ಶಬಾಬ್' ಭಯೋತ್ಪಾದಕ ಸಂಘಟನೆ ಕೃತ್ಯ ಎಸಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೊಮಾಲಿಯಾ ಸರ್ಕಾರವನ್ನು ಉರುಳಿಸಲು ಹೋರಾಡುತ್ತಿರುವ ಅಲ್-ಶಹಾಬ್ ಸಂಘಟನೆ ಇತ್ತೀಚೆಗೆ ನಡೆದ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ಇದನ್ನೂ ಓದಿ: ಕೋವಿಡ್​ ಸಂಕಷ್ಟದಲ್ಲಿ ರಾಜ್ಯಗಳ ನೆರವಿಗೆ ನಿಂತ ಕೇಂದ್ರ ಸರ್ಕಾರ

ಫೆಬ್ರವರಿ 8 ರಂದು ಸೊಮಾಲಿಯಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇಂದು ಬಾಂಬ್​ ದಾಳಿ ಮೂಲಕ ಸರ್ಕಾರಿ ಅಧಿಕಾರಿಗಳ ಹತ್ಯೆಗೆ ಯತ್ನಿಸಲಾಗಿದೆ. ಈವರೆಗೆ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಹೋಟೆಲ್‌ನಲ್ಲಿದ್ದ ಕೆಲವರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದಾಳಿಯಲ್ಲಿ ಬದುಕುಳಿದವರಲ್ಲಿ ಮಾಜಿ ರಕ್ಷಣಾ ಸಚಿವರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details